
ಸಂಜೆವಾಣಿ ವಾರ್ತೆ
ಕೊಟ್ಟೂರು, ಆ.15: ಭಾರತ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತಾ ಸಾಗುತ್ತಾ ಹೊರಟಿದೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೇಮಿರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಇದರ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮಹಾತ್ಮಾ ಗಾಂಧೀಜಿ, ಭಗತ್ ಸಿಂಗ್, ಸಾವಿರಾರು ವೀರರ ತ್ಯಾಗ, ಬಲಿದಾನ ನಡುವೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಶ್ರಮ ವಹಿಸಿದ್ದಾರೆ, ಇವರನ್ನು ನಾವು ಪ್ರತಿ ದಿನ ನೆನೆಯಬೇಕು,
ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು ಹಳ್ಳಿಗಳ ಅಭಿವೃದ್ಧಿಗಾಗಿ ಗ್ರಾಮ ಸಡಕ್ ಯೋಜನೆ ಜಾರಿಗೆ ತಂದರು. ಇವರ ಕನಸ್ಸಿನಂತೆ ನಮ್ಮ ಭಾರತ ಅಭಿವೃದ್ಧಿಯತ್ತಾ ಸಾಗುತ್ತಿದೆ, ಕರ್ನಾಟಕದಲ್ಲಿ ನೀರಾವರಿ ವ್ಯವಸ್ಥೆ ಮಾಡಿದ ಕೀರ್ತಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಸಲ್ಲುತ್ತದೆ ಎಂದರು,
ನಮ್ಮ ದೇಶ ಭವ್ಯ ಅಭಿವೃದ್ಧಿಯತ್ತಾ ಸಾಗುತ್ತಿದ್ದು ನಾವು ಸಹ ಇದಕ್ಕೆ ಶ್ರಮ ವಹಿಸಬೇಕು ಎಂದರು.
ನಂತರ ತಹಶೀಲ್ದಾರರಾದ ಅಮರೇಶ್ ಮಾತನಾಡಿ
ಭಾರತ ದೇಶ ಸ್ವಾತಂತ್ರ್ಯ ಪಡೆಯಲು ಎಂಬತ್ತಕ್ಕೂ ಹೆಚ್ಚು ಹೋರಾಟಗಾರರು ಕೊಟ್ಟೂರಿನವರು ಶ್ರಮ ವಹಿಸಿದ್ದು ವಿಶೇಷವಾಗಿದೆ. ಭಾರತವು ವೈವಿಧ್ಯತೆ ನಾಡಾಗಿದೆ ಮಾರ್ಪಟ್ಟಿದೆ, ನಾವು ಭ್ರಷ್ಟಾಚಾರ, ಹಿಂಸೆ, ತೊಲಗಿಸಲು ಶ್ರಮ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಗುರುದೇವ ಶಾಲೆಯ ವಿದ್ಯಾರ್ಥಿಗಳು ರೈತರ ಗೀತೆಯನ್ನು ಹಾಡಿದರು.
ಶಿಕ್ಷಕರಾದ ಬಸವರಾಜ್ ಸ್ವಾಗತ ನೆರವೇರಿಸಿದರು.
ಪಿಎಸ್ಐ ಗೀತಾಂಜಲಿ ಸಿಂಧೆ ನೇತೃತ್ವದಲ್ಲಿ ಪಥ ಸಂಚಲನ ಕೈಗೊಳ್ಳಲಾಯಿತು. ಈ ಪಥ ಸಂಚಲನದಲ್ಲಿ 18 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿಯಾದ ಪರಮೇಶ್ವರಪ್ಪ ಜಿ, ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯಾದ ನಸುರುಲ್ಲಾ, ಸಿಪಿಐ ವೆಂಕಟಸ್ವಾಮಿ ಪಿ, ಪಟ್ಟಣ ಪಂಚಾಯತಿಯ ಸದಸ್ಯರಾದ ಬಾವಿಕಟ್ಟಿ ಶಿವಣ್ಣ, ತಿಪ್ಪೇಸ್ವಾಮಿ, ಕೊಟ್ರೇಶ್, ವೀಣಾ ವಿವೇಕಾನಂದ, ಬೋಧಿ ಶಿವಕುಮಾರ್ ಹಾಗೂ ಕಾಮಶೆಟ್ಟಿ ಕೊಟ್ರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿವಿಧ ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲಾಯಿತು.