ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರ


ಗದಗ,ಮಾ.9: ಸಮಾಜದಲ್ಲಿನ ಸ್ಥಿತಿಗತಿಗಳನ್ನು ಅರಿತು ಅವುಗಳನ್ನು ಪ್ರಶ್ನಿಸುವ ಮನೋಭಾವನೆ ಇಂದಿನ ಮಹಿಳೆಯರಲ್ಲಿ ಬೆಳೆಯಬೇಕಿದೆ. ಅಲ್ಲದೇ ಪ್ರತಿಯೊಂದು ಕಾರ್ಯಯೋಜನೆಗಳಲ್ಲಿ ಮಹಿಳೆಯರು ಹೆಚ್ಚು ಕ್ರೀಯಾಶೀಲತೆಯನ್ನು ಬೆಳೆಸಿಕೊಂಡು ಸಮಾಜದ, ಕುಟುಂಬದ ಅಭಿವೃದ್ಧಿಗೆ ಸಹಕಾರ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಉಪನ್ಯಾಸಕಿ ಡಾ. ಜ್ಯೋತಿ ಸಿ.ವಿ. ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಎಸ್ ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವದಲ್ಲಿ ಅವರು ಮಾತನಾಡಿದರು.
ವಿಶ್ವದಲ್ಲಿ ಅನೇಕ ಮಹಿಳೆಯರು ನಿರಂತರವಾಗಿ ವೈಯಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ. ಎಲ್ಲಾ ಮಹಿಳೆಯರು ತಮ್ಮ ಕಠಿಣ ಪರಿಶ್ರಮದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಮಹಿಳಾ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ವಿಶೇಷ ದಿನ ಇದಾಗಿದೆ. ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.ಇಂದಿನ ಮಹಿಳೆಯರು ಭವ್ಯ ಭಾರತವನ್ನು ಬೆಳಗು ಅಡಿಪಾಯಗಳಾಗಿ, ಪ್ರತಿಯೊಬ್ಬರು ಸಾಕ್ಷರರಾಗಬೇಕು. ಸಾಕ್ಷರರನ್ನಾಗಿಸೋಣ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ನಿರಂತರವಾಗಿರಲಿ, ಗಟ್ಟಿಯಾದ ಹೆಜ್ಜೆ ಹಾಕೋಣ ಎಂದರು.
ಪ್ರಾಚಾರ್ಯರಾದ ಡಾ. ಎಸ್.ಆರ್. ಪಾಟೀಲ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಒಬ್ಬ ವ್ಯಕ್ತಿ ಬದಲಾದರೆ ಜಗತ್ತು, ದೇಶ ಬದಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದ್ದು ಎಂದರು.
ಈವೇಳೆ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ಜರುಗಿದವು. ಗ್ರಂಥಪಾಲಕರಾದ ಡಾ. ಭಕ್ತಿ ಬಡಿಗಣ್ಣನವರ, ಡಾ. ವಿಜಯ ಮುರದಂಡೆ, ಎಸ್.ಟಿ. ಮೂರಶಿಳ್ಳಿನ, ಜೈಹನುಮಾನ ಎಚ್.ಕೆ, ಡಾ.ಸಿ.ಬಿ. ರಣಗಟ್ಟಿಮಠ, ಬಿ.ಸಿ.ಜಾಲಿಗಿಡದ, ಡಿ.ಎಲ್. ಬಿಳಗೆ, ಎಸ್.ಎಸ್. ಅರಕೇರಿ, ವಿದ್ಯಾರ್ಥಿಗಳ ಪ್ರತಿನಿಧಿ ಸಹನಾ ಕಾರ್ಕಳ ಸೇರಿಸಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಶ್ರೀದೇವಿ ಕಾಗನೂರ ಪ್ರಾರ್ಥಿಸಿದರು. ಚೈತ್ರಾ ಗೌಡ್ರ ಸ್ವಾಗತಿಸಿದರು. ಬಿ.ಬಿ. ಹಜರಾ ನಾಲಬಂದ ನಿರೂಪಿಸಿದರು. ಅಕ್ಕಮಹಾದೇವಿ ಪಾಟೀಲ ವಂದಿಸಿದರು.