ಅಭಿವೃದ್ಧಿಗೆ ಬುದ್ದನ ಸೂತ್ರಗಳು ಮೂಲ ಮಂತ್ರ-ಶಂಕರ್

ಆನೇಕಲ್, ನ.೪: ಭಾರತವನ್ನು ಬುದ್ದನ ದೇಶವನ್ನಾಗಿ ಮಾಡಲು ಅಂಬೇಡ್ಕರ್ ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಜೊತೆಗೆ ಎಲ್ಲಾ ವರ್ಗದ ಜನರು ಬೌದ್ದ ಧರ್ಮದ ದೀಕ್ಷೆಯನ್ನು ಪಡೆದು ಕೊಳ್ಳಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ರವರು ತಿಳಿಸಿದರು.
ಅವರು ಪಟ್ಟಣದ ಸ್ವರ್ಣ ಮಹೋತ್ಸವ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆನೇಕಲ್ ತಾಲ್ಲೂಕು ಸಮಿತಿ ವತಿಯಿಂದ ಸಾಮ್ರಾಟ್ ಅಶೋಕ ವಿಜಯ ದಶಮಿ ಅಂಗವಾಗಿ ಅಂಬೇಡ್ಕರ್ ರವರ ೬೪ ನೇ ಧಮ್ಮ ದೀಕ್ಷಾ ಪರಿವರ್ತನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ದೇಶ ಅಭಿವೃದ್ದಿಗೊಂಡು ಬದಲಾವಣೆ ದಿಕ್ಕಿನಲ್ಲಿ ಸಾಗಬೇಕಾದರೆ ಬುದ್ದನ ಸೂತ್ರಗಳು ಮೂಲ ಮಂತ್ರವಾಗಿದೆ ಎಂದರು. ನಾಗಕುಲದ ಜನರ ನಡುವೆ ವಿಷ ಬೀಜವನ್ನು ಬಿತ್ತಿ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿರುವ ಬ್ರಾಹ್ಮತ್ವ ವಾದಿಗಳಿಗೆ ಬುದ್ದಿ ಕಲಿಸುವ ಕಾಲ ಸಮೀಪವಾಗಿದ್ದು ಈ ದೇಶದ ಮೂಲ ನಿವಾಸಿಗಳು ಒಗ್ಗಟ್ಟಾಗಿ ಬುದ್ದನ ನಾಡನ್ನು ಕಟ್ಟಲು ಮುಂದೆ ಬರಬೇಕಿದೆ ಎಂದರು. ಬೌದ್ದ ಧರ್ಮವನ್ನು ಅನೇಕ ರಾಷ್ಠಗಳು ಪಾಲನೆ ಮಾಡುತ್ತಿದ್ದಾರೆ ಆದರೆ ಇದೇ ನೆಲದಲ್ಲಿ ಹುಟ್ಟಿದ ಬೌದ್ದ ಧರ್ಮವನ್ನು ಇಂದು ನಾವು ಸಂರಕ್ಷಣೆ ಮಾಡುವ ಪರಿಸ್ಥಿಯಲ್ಲಿ ಇದ್ದೇವೆ ಎಂದರು.
ಸಾಮ್ರಾಟ್ ಅಶೋಕ ಬೌದ್ದ ಧರ್ಮವನ್ನು ದೀಕ್ಷೆ ಪಡೆದ ದಿನವನ್ನು ಮನುವಾದಿಗಳು ಸುಳ್ಳು ಕತೆ ಕಟಿ, ವಿಕೃತಗೊಳಿಸಿ ವಿಜಯ ದಶಮಿ ಎಂದರೆ ಭಗವಂತ ಮಹಿಷನನ್ನು ಕೊಂದ ದಿನ ನರಕಾಸ್ಪುರನನ್ನು ಬಲಿ ತೆಗೆದುಕೊಂಡ ದಿನ ಎಂದು ಸುಳ್ಳು ಹೇಳಿ ಬೌದ್ದರಾಜ್ಯರನ್ನು ಕೊಂದು ಹಬ್ಬಗಳನ್ನು ಆಚರಣೆ ಮಾಡುತ್ತಿದ್ದಾರೆ ಇನ್ನಾದರು ಜನರು ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ವಿದೆ ಎಂದರು.
ಪರಿಶಿಷ್ಠ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ಜನಾಂಗದವರಿಗೆ ಮೀಸಲಾತಿ, ಶಿಕ್ಷಣ, ಮತದಾನದ ಹಕ್ಕು ಸೇರಿದಂತೆ ಅನೇಕ ಹಕ್ಕುಗಳನ್ನು ಕೊಟ್ಟಿರುವುದು ಅಂಬೇಡ್ಕರ್ ರವರು ಅಂತಹ ಮಹಾನ್ ನಾಯಕ ತೋರಿದಿ ಬೌದ್ದ ಧರ್ಮ ದತ್ತಾ ನಾವೆಲ್ಲರೂ ಮುಂದೆ ಸಾಗಿ ಬುದ್ದನ ನಾಡನ್ನು ಮರು ಸ್ಥಾಪಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆನೇಕಲ್ ತಾಲ್ಲೂಕು ಪ್ರಧಾನ ಸಂಚಾಲಕರಾದ ಮಾರಗೊಂಡನಹಳ್ಳಿ ದಶರಥ್ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದಶರಥ್. ಸಂಪಂಗಿರಾಮ್, ನೆರಳೂರು ಮುನಿಕೃಷ್ಣಪ್ಪ, ನಿರ್ಮಲ, ಮಣಿಪಾಲ್ ರಾಜಪ್ಪ, ಎಂ.ಸಿ. ಹಳ್ಳಿ ವೇಣು, ಜಿಗಳ ಶ್ರೀರಾಮ್, ಬಳಗಾರನಹಳ್ಳಿ ಮಂಜು, ಮಧು, ಮುನಿನಂಜಪ್ಪ, ತಂಗರಾಜ್ ಮತ್ತಿತರು ಇದ್ದರು.