
ಬೆಂಗಳೂರು,ಮೇ ೪:ಬಸವನಗುಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ರವಿಸುಬ್ರಹ್ಮಣ್ಯ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬಸವನಗುಡಿ ಕ್ಷೇತ್ರದ ಬಸವನಗುಡಿ ವಾರ್ಡ್‌ನ ತ್ಯಾಗರಾಜನಗರ, ಗ್ರೇಪ್ ಗಾರ್ಡನ್, ಭೋವಿ ಕಾಲೋನಿ ಸೇರಿದಂತೆ ವಿವಿಧೆಡೆ ಪಾದಯಾತ್ರೆ ನಡೆಸಿದ ರವಿಸುಬ್ರಹ್ಮಣ್ಯ ಅವರು ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಕೈಮುಗಿದು ಮನವಿ ಮಾಡಿದರು.
ಬಿಜೆಪಿಯ ಈ ಪ್ರಚಾರದಲ್ಲಿ ಇಂದು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಸಹ ಪಾಲ್ಗೊಂಡಿದ್ದು, ಕ್ಷೇತ್ರದ ಹಲವು ಬಿಜೆಪಿ ಮುಖಂಡರು, ನೂರಾರು ಕಾರ್ಯಕರ್ತರೊಂದಿಗೆ ರವಿಸುಬ್ರಹ್ಮಣ್ಯ ಅವರ ಜತೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಬಿಜೆಪಿಯ ಪರವಾಗಿ ಮತಯಾಚಿಸಿದರು.
ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ರವಿಸುಬ್ರಹ್ಮಣ್ಯ ಅವರು ಹೋದೆಡೆಯಲ್ಲೆಲ್ಲ ಜನ ವಿಶ್ವಾಸದಿಂದ ಅವರನ್ನು ಬರಮಾಡಿಕೊಂಡು ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮತಯಾಚನೆಗೆ ತೆರಳಿದ ಸಂದರ್ಭದಲ್ಲಿ ರವಿಸುಬ್ರಹ್ಮಣ್ಯ ಅವರು ಕ್ಷೇತ್ರದಲ್ಲಿ ತಾವು ಇದುವರೆಗೂ ಮಾಡಿರುವ ಅಭಿವೃದ್ಧಿ ಕೆಲಸವನ್ನು ಮತದಾರರಿಗೆ ಮನದಟ್ಟು ಮಾಡಿ ಅಭಿವೃದ್ಧಿಗಾಗಿ ತಮ್ಮನ್ನು ಬೆಂಬಲಿಸಿ, ಗೆಲ್ಲಿಸಿ ಎಂದು ಮನವಿ ಮಾಡಿದರು.
ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸಗಳು ಆಗಿವೆ. ಮೂಲಸೌಕರ್ಯ ಒದಗಿಸಲು ಜಾರಿ ಮಾಡಿರುವ ಯೋಜನೆಗಳು ಇವುಗಳನ್ನೆಲ್ಲ ರವಿಸುಬ್ರಹ್ಮಣ್ಯ ಅವರು ಮತದಾರರ ಗಮನಕ್ಕೆ ತಂದು ಮತ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ವಕೀಲರ ಪ್ರಕೋಷ್ಠದ ಸಂಚಾಲಕ ಯೋಗೇಂದ್ರ, ಮಂಡಲ ಅಧ್ಯಕ್ಷ ಕೆ.ಜಿ. ಗಿರೀಶ್, ವಕೀಲರಾದ ರಾಜೇಶ್, ಕಟ್ಟೆ ಸತ್ಯನಾರಾಯಣವಾರ್ಡಿನ ಅಧ್ಯಕ್ಷರಾದ ರಾಜೇಶ್ ಸೇರಿದಂತೆ ಹಲವು ಮುಖಂಡರು ಇದ್ದರು.
ಬಸವನಗುಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ರವಿಸುಬ್ರಹ್ಮಣ್ಯ ಅವರು ಇಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ವಕೀಲರ ಪ್ರಕೋಷ್ಠದ ಮುಖ್ಯಸ್ಥ ವಿವೇಕ್ ಸುಬ್ಬಾರೆಡ್ಡಿ ಅವರ ಜತೆಗೂಡಿ ಕ್ಷೇತ್ರದ ಹಲವೆಡೆ ಮತಯಾಚನೆ ನಡೆಸಿದರು. ಬಿಜೆಪಿ ವಕೀಲರ ಪ್ರಕೋಷ್ಠದ ಸಂಚಾಲಕ ಯೋಗೇಂದ್ರ, ಮಂಡಲ ಅಧ್ಯಕ್ಷ ಕೆ.ಜಿ. ಗಿರೀಶ್, ರಾಜೇಶ್, ಕಟ್ಟೆ ಸತ್ಯನಾರಾಯಣ ವಾರ್ಡ್‌ನ ಅಧ್ಯಕ್ಷ ರಾಜೇಶ್ ಮತ್ತಿತರರು ಇದ್ದಾರೆ.