ಅಭಿವೃದ್ಧಿಗೆ ಎಲ್ಲರ ಸಹಕಾರ ಅತಿ ಮುಖ್ಯ:ಅಲ್ಲಾಬಾಷ

ಸೈದಾಪುರ:ಮಾ.2:ಶಾಲಾ ಅಭಿವೃದ್ಧಿಗೆ ಎಲ್ಲರ ಸಹಕಾರ ಅತಿ ಮುಖ್ಯವಾಗಿದೆ. ಈ ದಿಸೆಯಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ನೂತನ ಎಸ್‍ಡಿಎಂಸಿ ಅಧ್ಯಕ್ಷ ಅಲ್ಲಾಬಾಷ ಹಿಚ್ಗೇರಿ ಮಾತನಾಡಿದರು.
ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಅಧ್ಯಕ್ಷ ಒಲಿಯೊದ್ದೀನ್ ಹಾಗೂ ಉಪಾಧ್ಯಕ್ಷ ಹುಸೇನ ಪಟೇಲರ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಯತ್ನ ಮಾಡಬೇಕಾಗಿದೆ. ಮಕ್ಕಳ ದಾಖಲಾತಿಯಂತೆ ಹಾಜರಾತಿ ಅತಿ ಮುಖ್ಯವಾಗಿದ್ದೂ ಪೋಷಕರು ಹೆಚ್ಚಿನ ಕಾಳಜಿ ವಹಿಸಿಬೇಕು. ನನಗೆ ನೀಡಿದ ಜವಬ್ದಾರಿಯನ್ನು ಸೇವಾ ಮನೋಭಾವನೆಯೊಂದಿಗೆ ಕಾರ್ಯ ನಿರ್ವಹಿಸತ್ತೇನೆ ಎಂದು ಹೇಳಿದರು. ನೂತನ ಉಪಾಧ್ಯಕ್ಷ ಗಪೂರ ಕುರೇಶಿ, ಮುಖ್ಯಗುರು ಫರ್ಕುಂದಾ ಬೇಗಂ, ಶಿಕ್ಷಕ ಸಿದ್ಧಲಿಂಗಯ್ಯ ಸ್ವಾಮಿ, ಹಸೀನಾ ಬಾನು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.