ಅಭಿವೃದ್ಧಿಗೆ ಆದ್ಯತೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜೂ.26: ಪಕ್ಷಾತೀತವಾಗಿ ನಾನು ಕೆಲಸ ಮಾಡುತ್ತೆನೆ.ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಶಾಸಕ ಎನ್. ವೈ. ಗೋಪಾಲಕೃಷ್ಣ ತಿಳಿಸಿದರು.
ಅವರು ಇಂದು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಮ್ಮಿಕೊಂಡಿದ್ದ ಅಧಿಕಾರಿಗಳ ಸಭೆ ಯಲ್ಲಿ ಮಾತನಾಡುತ್ತಾ,
ನಾನು ದ್ಯೇಷ ರಾಜಕಾರಣ ಮಾಡಲು ಬಂದಿಲ್ಲ, ನಮ್ಮ ತಾಲೂಕು ನಮ್ಮ ಜನ ಅನ್ನೋ ಅಭಿಪ್ರಾಯ ಇಟ್ಟು ಕೊಂಡು ಬಂದಿದ್ದೇನೆ ನಮ್ಮ ತಾಲೂಕನ್ನು ಅಭಿವೃದ್ಧಿ ಪಡಿಸುವುದೆ ನಮ್ಮ ಗುರಿ.
ಇಲ್ಲ ಸಲ್ಲದ ಮಾತುಗಳಿಗೆ ನನ್ನಲ್ಲಿ ಅವಕಾಶವಿಲ್ಲ ಮೊದಲು ಅಭಿವೃದ್ಧಿ ಯೋಜನೆ ತರೋಣ ಕೆಲಸ ಮಾಡೋಣ ಎನ್ನುತಾ, ಈಗ ಹೊಸ ತಾಲೂಕು ಪಂಚಾಯಿತಿ ನಿರ್ಮಾಣ ಮಾಡಲು ಒಂದು ಕೋಟಿ ಎಂಬತ್ತು ಲಕ್ಷ ಹಣ ಮುಂಜೂರಾಗಿದೆ ಆದರಿಂದ ಹೊಸ ತಾಲೂಕು ಪಂಚಾಯಿತಿ ಯನ್ನು  ಹೊಸದಾಗಿ ನಿರ್ಮಾಣ ಆಗಿರುವ ಮಿನಿ ವಿಧಾನಸೌಧದ ಪಕ್ಕ ತಾಲೂಕು ಪಂಚಾಯಿತಿ ಯನ್ನು ನಿರ್ಮಾಣ ಮಾಡುವುದರಿಂದ ಜನರಿಗೆ ತುಂಬ ಅನುಕೂಲ ವಾಗುತ್ತದೆ ಎಂದರು.
ಅದಷ್ಟು ಬೇಗ ಕಾಮಗಾರಿ ಪ್ಲಾನ್ ಮಾಡಿ ಕೆಲಸ ಪ್ರಾರಂಭಿಸಲು  ನ. ಇಎಂ ಇಂಜಿನಿಯರ್ ಲಾಲ್ ಸಾಬ್ ಗೆ ಆದೇಶಿಸಿದರು.
ನಂತರ  ದೀರ್ಘ ವಾಗಿ ಅಧಿಕಾರ ಗಳೊಂದಿಗೆ ಕರುಗಳ  ಮತ್ತು ಸಾರ್ವಜನಿಕ ರೊಂದಿಗೆ ಕೆ. ಎಸ್. ಆರ್. ಟಿ ಸಿ ಬಸ್ ನಿಲ್ದಾಣದ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ. ವಿ. ರೂಪ ಇಓ ಜಾನಕಿ ರಾಮ್, ಟಿಎಚ್.ಓ ( ಪ್ರಭಾರಿ) ಮಧು ಕುಮಾರ್, ಪ ಸಂ  ಸ ನೀ ರಂಗಪ್ಪ, ಅರಣ್ಯ ಇಲಾಖೆ ಮಸ್ತಾನ್, ಚೀಪ್ ಪ ಪಂ ಮು ಶ್ರೀಮತಿ ಲೀಲಾವತಿ, ಕೃಷಿ ಇಲಾಖೆ ಸ ನೀ ಉಮೇಶ್ ಇಂಜಿನಿಯರ್ ಗಳಾದ ಪ್ರಕಾಶ್, ಪವನ್, ಮುಖಂಡರಾದ  ತಾ ಕಾ ಅ ಕಲಿಂವುಲ್ಲಾ, ಬಡೋಬಯ್ಯ,   ಪಾಟೀಲ್ ಜಿ. ಪಾಪ ನಾಯಕ, ಜಿ. ಪ್ರಕಾಶ್ ರವಿಕುಮಾರ್ ರೈ ಸಂ ಅ ,ಬಿ.ಟಿ.ನಾಗಭೂಷಣ್ ಹಾಗೂ ಇನ್ನು ಮುಂತಾದವರಿದ್ದರು.