ಅಭಿವೃದ್ಧಿಗೆ ಆದ್ಯತೆ ನೀಡಿ ಅನುದಾನ


ಬ್ಯಾಡಗಿ,ಮಾ.25: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ದೂರದೃಷ್ಟಿ ಯೋಜನೆಗಳನ್ನು ರೂಪಿಸಿ ಅದಕ್ಕಾಗಿ ಸಾವಿರಾರು ಕೋಟಿ ಅನುದಾನ ಅನುದಾನವನ್ನು ನೀಡುತ್ತಿವೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹೆಡಿಗ್ಗೊಂಡ -ಕಾಗಿನೆಲೆ ರಸ್ತೆ ನಿರ್ಮಾಣ ಹಾಗೂ ಬನ್ನಿಹಳ್ಳಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಮಹರ್ಷಿ ವಾಲ್ಮೀಕಿ ಭವನದ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕ್ಷೇತ್ರದ ಎರಡು ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಯೋಜನೆಗಳಿಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು 369ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಯ ಲೆಕ್ಕ ಕೊಟ್ಟು ಮತವನ್ನು ಕೇಳಲು ಬರುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ, ಉಪಾಧ್ಯಕ್ಷೆ ಗಿರಿಜವ್ವ ಅಂಬಲಿ, ಸದಸ್ಯರಾದ ಈರಣ್ಣ ಅಗಸಿಬಾಗಿಲ, ಶಿವಾನಂದ ಕದರಮಂಡಲಗಿ, ಮಂಜುನಾಥ ಮುದಿಯಮ್ಮನವರ, ಅಕ್ಕಮ್ಮ ಶಿಡೇನೂರ, ಮಂಗಳಾ ಬಡಿಗೇರ, ಅಕ್ಕಮ್ಮ ಲಿಂಗದಹಳ್ಳಿ, ಮುಖಂಡರಾದ ಶಿವಾನಂದ ಕಡಗಿ, ಮೃತ್ಯುಂಜಯ ಕಡೇಮನಿ, ಶಿವಯೋಗಿ ಶಿಡೇನೂರ, ಎಇಇ ಉಮೇಶ ನಾಯ್ಕ್, ಜೆಇ ಎ.ಎಸ್.ಪಾಟೀಲ, ಪಿಡಿಓ ಜಗದೀಶ ಮಣ್ಣಮ್ಮನವರ, ಗುತ್ತಿಗೆದಾರ ಎಸ್.ಬಿ.ಸಣ್ಣಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.