ಅಭಿವೃದ್ಧಿಗಾಗಿ ಮರೆಯಬೇಡಿ 3ನೇ ವಾರ್ಡ್ ಸ್ವತಂತ್ರ ಅಭ್ಯರ್ಥಿ ಪ್ರಭಂಜನ್


ಬಳ್ಳಾರಿ, ಏ.26: ವಾರ್ಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನನಗೆ ಮತನೀಡಿ ಆಯ್ಕೆ ಮಾಡಿ ಸದಾ ನಿಮ್ಮ ಸೇವೆಯಲ್ಲಿರುವೆ ಎಂದು ಅಂತಿಮವಾಗಿ ವಾರ್ಡಿನ ಮತದಾರರಲ್ಲಿ 3ನೇ ವಾರ್ಡಿನ ಸ್ವತಂತ್ರ ಅಭ್ಯರ್ಥಿ ಎಂ.ಪ್ರಭಂಜನ್ ಕುಮಾರ್ ಮನವಿ ಮಾಡುವುದು ಕಂಡುಬಂತು.
ನಾಳೆ ಬೆಳಿಗ್ಗೆ 7 ರಿಂದ ಮತದಾನ ನಡೆಯಲಿದೆ. ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ದೊರತಿರುವ ಮಹತ್ವದ ಹಕ್ಕಾಗಿದೆ. ಅದನ್ನು ಮರೆಯದೆ ಬಂದು ಚಲಾಯಿಸಿ ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬೇಡಿ ಎಂದು ಮನವಿ ಮಾಡಿದರು.
ಈಗಾಗಲೇ ಅನೇಕ ಬಾರಿ ನಿಮ್ಮ ಮನೆಗೆ ಹಲವಾರು ಮುಖಂಡರ ಜೊತೆ ಬಂದು ಮನವಿ ಮಾಡಿರುವೆ. ಈಗ ಮತ್ತೊಮ್ಮೆ ಮನವಿ ಮಾಡಿದೆ. ನಿಮ್ಮ ಮತ ನೀಡಿ ನಿಮ್ಮ ಆಟೋ ರಾಕೆಟ್ ವೇಗದಲ್ಲಿ ಓಡಬೇಕೆಂದು ಗಮನ ಸೆಳೆಯುವಂತಿತ್ತು.