ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಸೋಮಶೇಖರ ರೆಡ್ಡಿ ಮತದಾರರಿಗೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ನಗರದ ಬಿಜೆಪಿ ಅಭ್ಯರ್ಥಿ, ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮತದಾರರಲ್ಲಿ ಮನವಿ‌ ಮಾಡಿದರು.
ಅವರು ಇಂದು ಬೆಳಿಗ್ಗೆ ನಗರದ ವಾರ್ಡ್ ನಂಬರ್ 15 ರ ವಡ್ಡರ್ ಬಂಡೆ ಮತ್ತು ಸಿಂದಗಿ ಕಾಂಪೌಂಡಿನಲ್ಲಿ  ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮತದಾರರ ಬಳಿ ಮಾತನಾಡುತ್ತಿದ್ದರು.
ಈ‌ ಮೊದಲು ನಿಮ್ಮ ಓಣಿಗಳು ಮಣ್ಣಿನಿಂದ ಕೂಡಿದ್ದವು ಈಗ ಎಲ್ಲವೂ ಕಾಂಕ್ರೀಟ್ ಆಗಿವೆ. ಸ್ವಚ್ಚ ಸುಂದರ ಬಳ್ಳಾರಿ‌ವನಗರವಾಗಿ‌ ಅಭಿವೃದ್ಧಿ ಮಾಡಲು ಬಿಜೆಪಿಗೆ ಮತ ನೀಡಿದರೆ ಮಾತ್ರ ಸಾಧ್ಯ ಎಂದರು.
ಈಗ ಕುಡಿಯುವ ನೀರಿನ ಸಮಸ್ಯೆ ಆದಷ್ಟು ಬಗೆಹರಿದಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದಿನಾಲು‌ ನೀರು ಕೊಡಲು 200 ಕೋಟಿ ರೂ ಹೆಚ್ಚಿನ ಯೋಜನೆ ರೂಪಿಸಿದೆ ಚುನಾವಣೆ ಮುಗಿದ ತಕ್ಷಣ ಜಾರಿಗೆ ಬರಲಿದೆಂದು ತಿಳಿಸಿದರು.
ಈ ಸಂದರ್ಭದಲ್ಲಿ  ಬಿಜೆಪಿ  ಜಿಲ್ಲಾ ಮಾಧ್ಯಮ ಸಹ ಸಂಚಾಲಕ ತೊಗರಿ ರಾಜೀವ್, ಮಾಜಿ ಕಾರ್ಪೊರೇಟರ್  ನಾಗಭೂಷಣ್, ಸ್ಥಳೀಯ ಮುಖಂಡರಾದ ತಮಣ್ಣ, ಶೇಖರ್, ಗುರುರಾಜ. ಗೋಪಾಲ್, ಬದ್ರಿ ಕಾಂತ್ ರವೀಂದ್ರ ರೆಡ್ಡಿ ಗೋಪಿ ಹುಲಿ ಹುಲಿಗಣ್ಣ ಜಾವಿದ್ದು ಎಲ್ಲಮ್ಮ, ಭರತ್, ಸಾಗರ ಮಸ್ತಾನಮ್ಮ ಮೊಹಮ್ಮದ್ ಅಲಿ, ಎರ್ರಿಸ್ವಾಮಿ, ಮಹೇಶ್ ಶಿವ, ಸೀನಾ ಹಾಗೂ ಮಹಿಳಾ ಮುಖಂಡರಾದ ಸುಗುಣ  ಡಾ. ಅರುಣ, ಶಿವಕೃಷ್ಣ, ಪುಷ್ಪಲತಾ ಮೊದಲಾದವರು ಪರಚಾರದಲ್ಲಿ ಪಾಲ್ಗೊಂಡಿದ್ದರು