
ದಾವಣಗೆರೆ,ಮೇ.4: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದು, ಬ್ಯಾಟ್ಸ್ ಮೆನ್ ಗುರುತಿಗೆ ಬೆಂಬಲ ನೀಡುವಂತೆ ಮಹಮ್ಮದ್‌ಹ ಯಾತ್ ಮನವಿ ಮಾಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾನು ಮುಂದಿನ ದಿನಗಳಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಜನ ಸಾಮಾನ್ಯರ ಬೆಂಬಲ ದೊರೆತರೆ ಅವೈಜ್ಞಾನಿಕ ಕ್ಷೇತ್ರ ವಿಂಗಡಣೆ ಸರಿಮಾಡಲು ಶ್ರಮಿಸುವೆ. ಉತ್ತರ ಕ್ಷೇತ್ರವು ಸಾಕಷ್ಟು ಅಭಿವೃದ್ಧಿ ಆಗಿದ್ದರೂ ಸಹ ಸಾಮಾಜಿಕ ಅಸಮತೋಲನ ಹಾಗೂ ಅವೈಜ್ಞಾನಿಕ ಕ್ಷೇತ್ರ ವಿಂಗಡಣೆಯಿAದ ಬಹಳಷ್ಟು ಪ್ರದೇಶಗಳು ಇಂದಿಗೂ ಅಭಿವೃದ್ಧಿ ಹೊಂದದೆ ಶೋಚನಿಯ ಸ್ಥಿತಿಯಲ್ಲಿ ಇವೆ. ಹಳೇ ಭಾಗದ ಹಲವು ನಗರಗಳಲ್ಲಿ ಮೂಲಭೂತ ಸಮಸ್ಯೆ ಇವೆ. ಇದನ್ನು ಗಮನಿಸಿದರೆ ಇಲ್ಲಿ ಯಾರಾದರೂ ಜನಪ್ರತಿನಿಧಿ ಇದ್ದಾರೋ, ಇಲ್ಲವೋ ಎನ್ನುವ ಅನುಮಾನ ಮೂಡುತ್ತದೆ ಎಂದರು.ದಾವಣಗೆರೆ ಉತ್ತರ ಕ್ಷೇತ್ರದ ಜನಸಾಮಾನ್ಯ ಮತದಾರರು ಸಂಪೂರ್ಣ ಬೆಂಬಲ ನೀಡುತ್ತಾರೆ ಎಂಬ ಪೂರ್ಣ ನಂಬಿಕೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ದ್ಧೇನೆ. ಪ್ರಜ್ಞಾವಂತ ಮತದಾರರು ನನ್ನ ಗುರುತಾದ ಬ್ಯಾಟ್ಸ್ ಮನ್ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ರಾಘ ವೇಂದ್ರ, ಅಹ್ಮದ ಭಾಷ, ಮಹ ಮ್ಮದ್ ಯೂನಸ್, ಸಾಧಿಕ್ ಇದ್ದರು.