ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಿ: ದೇವೇಗೌಡ

ಸಿರಾ, ಅ. ೩೧- ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ರೈತರ ಏಳ್ಗೆಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ ಎಂಬುದನ್ನು ತೀರ್ಮಾನ ಮಾಡುವ ಶಕ್ತಿ ನಿಮಗಿದೆ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಇದರಿಂದ ಪ್ರಯೋಜನ ಇದೆ ಅನ್ನೋದನ್ನು ಈ ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಹಂದಿಕುಂಟೆ ಗ್ರಾ.ಪಂ. ವ್ಯಾಪ್ತಿಯ ಮಾರಪ್ಪನಹಳ್ಳಿ, ಬಡಮಾರನಹಳ್ಳಿ, ಗೋಣಿಹಳ್ಳಿ, ಹಂದಿಕುಂಟೆ ಗ್ರಾಮಲ್ಲಿ ಜೆಡಿಎಸ್ ಪಕ್ಷ ಅಯೋಜಿಸಿದ್ದ ಸಿರಾ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರ ರೋಡ್ ಶೋ ನಡೆಸಿ ಅವರು ಮಾತನಾಡಿದರು.
ಕರ್ನಾಟಕದಿಂದ ಮೊಟ್ಟ ಮೊದಲ ಮತ್ತು ಈ ತನಕ ಏಕೈಕ ಕನ್ನಡಿಗ ಪ್ರಧಾನಿ ನಾನಾಗಿದ್ದೆ. ಎಲ್ಲಾ ಜಾತಿ ಧರ್ಮಗಳಿಗೆ, ಜನಸಾಮಾನ್ಯರಿಗೆ ಅನುಕೂಲವಾಗುವಂತ ಯೋಜನೆಗಳನ್ನು ತಂದಿದ್ದೇನೆ. ಈ ಭಾಗಕ್ಕೆ ಕೃಷಿ ಚಟುವಟಿಕೆಗೆ ಮತ್ತು ಶಾಶ್ವತ ಮತ್ತು ಕುಡಿಯುವ ನೀರಿನ ಯೋಜನೆಗೆ ಹೋರಾಟ ಮಾಡುವ ಸಂಕಲ್ಪ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಪ್ರ್ರಾಮಾಣಿಕ ರಾಜಕಾರಣಿಯಾಗಿ ದುಡಿದಂತ ಸತ್ಯನಾರಾಯಣರವರ ಕುಟುಂಬಕ್ಕೆ ಟಿಕೆಟ್ ನೀಡಿದ್ದೇವೆ. ಅವರ ಪತ್ನಿ ಅಮ್ಮಾಜಮ್ಮ ನಮ್ಮ ಪಕ್ಷದ ಅಭ್ಯರ್ಥಿ. ಇವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ, ನಮ್ಮ ಜೆಡಿಎಸ್ ಪ್ರಾದೇಶಿಕ ಪಕ್ಷವನ್ನು ಬಲಪಡಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಜಿ.ಪಂ. ಸದಸ್ಯ ಎಸ್. ರಾಮಕೃಷ್ಣ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಸತ್ಯನಾರಾಯಣ್‌ರವರ ಧರ್ಮಪತ್ನಿ ಅಮ್ಮಾಜಮ್ಮ ಸ್ಪರ್ಧೆ ಮಾಡಿದ್ದಾರೆ. ನಿಮ್ಮ ಮನೆಯ ಮಗಳು. ಇವರನ್ನು ಮೊಟ್ಟ ಮೊದಲಿಗೆ ಸಿರಾ ಕ್ಷೇತ್ರಕ್ಕೆ ಪ್ರಪ್ರಥಮ ಮಹಿಳಾ ಅಭ್ಯರ್ಥಿಯಾಗಿ ಕಣಕ್ಕೆ ನಮ್ಮ ಪಕ್ಷ ಇಳಿಸಿದೆ. ಇವರ ಗೆಲುವಿಗೆ ಪ್ರತಿಯೊಬ್ಬ ತಾಯಂದಿರು, ತಂದೆಯರು ಬೆಂಬಲ ನೀಡುವ ಮೂಲಕ ಇವರ ಆಯ್ಕೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಸತ್ಯನಾರಾಯಣರವರ ಪುತ್ರ ಸತ್ಯಪ್ರಕಾಶ್, ಸಿ.ಆ.ರ್ ಉಮೇಶ್, ಪೂಜಾರ ಮುದ್ದನಹಳ್ಳಿ ರಾಮಕೃಷ್ಣ, ಹನುಮಂತರಾಯಪ್ಪ, ಪಿ.ಆರ್.ಮಂಜುನಾಥ್, ಹನುಮಂತರಾಯಪ್ಪ, ಲಿಂಗದಹಳ್ಳಿ ಚೇತನಕುಮಾರ್ ಹಂದಿಕುಂಟೆ, ವಲೀಲ ಕಂಬದೂರ್ ಮಲ್ಲೇಶ್, ನಾಗರಾಜಪ್ಪ, ನರಸಿಂಹಯ್ಯ, ಮುದ್ದಣ್ಣ, ಗೋವಿಂದರಾಜು, ಹೊಸಹಳ್ಳಿ ರಾಮಚಂದ್ರಪ್ಪ, ನರಸಿಂಹಮೂರ್ತಿ, ಬುಡ್ಡನಯ್ಯ, ರವಿ, ರಾಜಪ್ಪ, ಪ್ರವೀಣ್, ರಾಜಪ್ಪ, ನಾಗರಾಜು, ಕಾಟನಹಳ್ಳಿ ಉಗ್ರೇಶ್‌ಗೌಡ, ಡಾ.ಚಂದ್ರೇಶೇಖರ್, ಕೃಷ್ಣೇಗೌಡ, ಮರಡಿ ರಂಗನಾಥ್, ಭೈರೇಗೌಡ ಮತ್ತಿತರರು ಪಾಲ್ಗೊಂಡಿದ್ದರು.