ಅಭಿವೃದ್ಧಿಗಾಗಿ ಗುಂಪು ರಚನೆ ಮೂಲಕ ಸಂಜೀವಿನಿ ಯೋಜನೆ

ಲಿಂಗಸೂಗೂರ: ಜು ೦೭
ಗ್ರಾಮೀಣ ಪ್ರದೇಶ ಜನರು ತಮ್ಮ ಜೀವನೋಪಾಯ ಉದ್ದೇಶದಿಂದ ಸಂಜೀವಿನಿ ಯೋಜನೆಯಲ್ಲಿ ಪ್ರತಿಯೊಬ್ಬರು ಸ್ವ ಸಹಾಯ ಗುಂಪುಗಳನ್ನು ರಚನೆ ಮಾಡಿಕೊಂಡು ಯೋಜನೆ ಉಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕ ಯೋಜನೆ ವ್ಯವಸ್ಥಾಪಕ ಈರಪ್ಪ ನಗನೂರು ತಿಳಿಸಿದರು.
ತಾಲೂಕೀನ ನೀರಲಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶ್ರೀ ಬಸಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಗುಂಪಿನ ಹಾಗೂ ನರೇಗಾ ಕೂಲಿ ಕಾರ್ಮಿಕರಿಗೆ ಬೇಟಿ ನೀಡಿದ ಅವರು ತಾಲೂಕಿನಲ್ಲಿ ಸಂಜೀವಿನಿ ಯೋಜನೆಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸ ಸ್ವಸಹಾಯ ಸಂಘ ರಚನೆ ಮಾಡಿಕೊಂಡು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್. ಎಮ್) ಕಾರ್ಯಕ್ರಮದಡಿಯಲ್ಲಿ ಸಾಕಷ್ಟು ಗ್ರಾಮೀಣ ಮಹಿಳೆಯರನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಿ ಅವರುಗಳ ಸಮಗ್ರ ಏಳಿಗೆಗೆ ಶ್ರಮಿಸುತ್ತಿದೆ.
ಈ ವರೆಗೆ ರಾಜ್ಯದಲ್ಲಿ ಅಧಿಕ ಬಡ ಮಹಿಳೆಯರು ಕಿರು ಮತ್ತು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಿದೆ ಹಾಗೂ ಕೃಷಿ ಆಧಾರಿತ ಗ್ರಾಮೀಣ ಬಡ ಮಹಿಳೆಯರಿಗಾಗಿ ವಿವಿಧ ರೀತಿಯ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಅಭಿವೃದ್ಧಿಗಾಗಿ ಗುಂಪುಗಳನ್ನು ರಚಿಸಬೇಕೆಂದು ತಿಳಿಸಿದರು.
ವಲಯ ಮೇಲ್ವಿಚಾರಕ ಬಸವರಾಜ ಕಟ್ಟಿಮನಿ ಮಾತನಾಡಿ ಸಂಜೀವಿನಿ ಯೋಜನೆಯಡಿಯಲ್ಲಿ ೧೮ ರಿಂದ ೩೫ ವಯಸ್ಸಿನ ನಿರುದ್ಯೋಗ ನಿರೋದ್ಯೋಗ ಯುವಕ ಯುವತಿಯರಿಗೆ ಸ್ವ ಉದ್ಯೋಗ ಮಾಡಲು ಹಲವಾರು ತರಬೇತಿಗಳು ಇರುವುದರಿಂದ ಯೋಜನೆಯನ್ನು ಉಪಯೋಗ ಮಾಡಿಕೊಳ್ಳಬೇಕು ಉದ್ಯೋಗ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಕೃಷಿ ವ್ಯವಸ್ಥಾಪಕ ಮಲ್ಲಪ್ಪ ಗಾಳಪೂಜಿ, ವಲಯ ಮೇಲ್ವಿಚಾರಕರು
ರಾಘವೇಂದ್ರ ಹಾಗೂ ಒಕ್ಕೂಟದ ಅಧ್ಯಕ್ಷರು ಗುರುಬಾಯಿ, ಎಂಬಿಕೆ ಪ್ರಿಯಾಂಕ ನೀರಲಕೇರಿ ಗುಂಪಿನ ಸದಸ್ಯರು ಭಾಗವಹಿಸಿದರು.