ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ  :ರಾಯರೆಡ್ಡಿ


ಸಂಜೆವಾಣಿ ವಾರ್ತೆ
ಕುಕನೂರು, ಜ.4: ಕಳೆದ ನಾಲ್ಕು ಐದು ವರ್ಷಗಳಿಂದ ಯಲಬುರ್ಗಾ ಕುಕನೂರು ತಾಲೂಕು ಅಭಿವೃದ್ಧಿ ಕಂಡಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ಈ ಸಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ ಹೇಳಿದರು.
ಇಂದು ಕುಕನೂರು ತಾಲೂಕಿನ ಗುದ್ನೇಪ್ಪನ ಮಠದಲ್ಲಿ ಬ್ಲಾಕ್ಕ್ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಯ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ದೇಶದಲ್ಲಿ ನೆಹರು, ಇಂದಿರಾಗಾಂಧಿ ಅವಧಿಯಲ್ಲಿ 500 ಕ್ಕೂ ಹೆಚ್ಚು ಆಣೆಕಟ್ಟು ಕಟ್ಟಲಾಗಿದೆ, ಬಿಜೆಪಿ ಪಕ್ಷದವರು ಒಂದೇ ಒಂದು ಡ್ಯಾಮ್ ಕಟ್ಟಿಸಿಲ್ಲ, ರಾಜ್ಯದಲ್ಲಿಯೂ ಕಾಂಗ್ರೆಸ್ ಆಡಳಿತದಲ್ಲಿ 50ಕ್ಕೂ ಹೆಚ್ಚು ಡ್ಯಾಮ್ ನಿರ್ಮಾಣವಾಗಿವೆ ಎಂದು ರಾಯರೆಡ್ಡಿ ಹೇಳಿದರು.
ಬಡವರಿಗಾಗಿ ಆಹಾರ ಭದ್ರತೆ ಕಾಯ್ದೆ ತಂದಿದ್ದು ಕಾಂಗ್ರೆಸ್ ಪಕ್ಷ, ಹಿಂದಿನ ಸಿದ್ದರಾಮಯ್ಯ ಸರ್ಕಾರ ರಾಜ್ಯದ 4.5 ಕೋಟಿ ಬಡವರಿಗೆ ಉಚಿತ ಅಕ್ಕಿ ಕೊಟ್ಟಿದೆ, ಕಾಂಗ್ರೆಸ್ ಪಕ್ಷಕ್ಕೆ ಬಡವರ ಕಷ್ಟಗೊತ್ತು ಎಂದು ರಾಯರೆಡ್ಡಿಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಅಡಿವೆಪ್ಪ ಬಾವಿಮನಿ, ಬಿ ಎಂ ಶಿರೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ, ಗುದ್ನೇಯ್ಯ ದೇವಗಣ ಮಠ, ಚನ್ನಬಸಯ್ಯ ಧೂಪದ್, ರುದ್ರಯ್ಯ ಇನಾಮದಾರ್, ರುದ್ರಯ್ಯ ಗಲಬಿ, ಶರಣಯ್ಯ ಬಂಡಿ ಇತರರು ಉಪಸ್ಥಿತರಿದ್ದರು.