ಅಭಿವೃದ್ದಿ ಸಹಿಸದ ಕಾಂಗ್ರೆಸ್; ಅಸಮಾಧಾನ

ಜಗಳೂರು.ಮೇ.೨೭: ಸಂಸದರಾದ ಜಿ.ಎಂ ಸಿದ್ದೇಶ್ವರ್ ಕ್ಷೇತ್ರ ಪ್ರವಾಸದ ಬಗ್ಗೆ ಮಾತನಾಡಿದ ಕಾಂಗ್ರೆಸ್ ನವರ ಹೇಳಿಕೆ ಖಂಡಿನೀಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ ಮಹೇಶ್ ಹೇಳಿದರು.ಪಟ್ಟಣದ ಪತ್ರಕರ್ತರಭವನದಲ್ಲಿ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಂಸದರ ಬಗ್ಗೆ ನಿಂದನೆ ಹೇಳಿಕೆ ನೀಡುವುದು  ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ. ರಾಜಕಾರಣಿಯಾಗಿ ವೈಯಕ್ತಿಕವಾಗಿ ನಿಂದನೆ ಮಾಡುವುದು ಎಲ್ಲಾ ಮತದಾರರಿಗೆ ಮಾಡಿದ ಅವಮಾನವಾಗಿದೆ ಎಂದು ಭಾವಿಸಿದ್ದೇವೆ. ಯಾರೇ ಆಗಲೀ ಮತೊಬ್ಬರನ್ನು ದೂಷಿಸಬಾರದು, ಅಭಿವೃದ್ದಿಗೆ ಸಲಹೆ, ಸಹಕಾರ ನೀಡಿ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.ಒಂದು ದಿನವೂ ಬಿಡುವಿಲ್ಲದೇ ಆಯಾ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ ಹಾಗೂ ತಾಲೂಕಾಡಳಿತದ ಜತೆ ಪ್ರತಿ ತಾಲೂಕಿಗೂ ಭೇಟಿ ನೀಡಿ ಕೊರೊನಾ ರೋಗಿಗಳನ್ನು ವಿಚಾರಿಸಿ ಧೈರ್ಯ ತುಂಬು ಕೆಲಸ ಮಾಡಿದ್ದಾರೆ. ಜಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ 53 ಲಕ್ಷದ ಆಕ್ಸಿಜನ್ ಘಟಕ ಸ್ಥಾಪಿಸಲು ವೈಯಕ್ತಿಕ ಅನುದಾನ ನೀಡಿದ್ದಾರೆ. ಶಾಸಕ ಎಸ್.ವಿ ರಾಮಚಂದ್ರ ಸೋಂಕಿತರಿಗೆ ಸ್ವತಃ ಖರ್ಚಿನಲ್ಲಿ ಬಗೆ ಬಗೆಯ ಉಪಹಾರ, ಊಟ ನೀಡುತ್ತಿದ್ದಾರೆ. ಜಿಲ್ಲೆಯ ಕಾಂಗ್ರೆಸ್‌ನ ಪ್ರಭಾವಿ ನಾಯಕರು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಆಕ್ಸಿಜನ್ ಖರೀದಿಗೆ 9 ಕೋಟಿ ಕೊಡುವುದಾಗಿ ಹೇಳಿದ್ದರು. ಆದರೆ ಇಂದಿಗೂ ಒಂದು ರೂಪಾಯಿ ಕೊಟ್ಟಿಲ್ಲ ಎಂದು ದೂರಿದರು. ಕೊರೋನ ಹತೋಟಿಗೆ ತರುವಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ದಿಟ್ಟೆ ಹೆಜ್ಜೆಯನ್ನಿಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ಸೋಂಕಿತ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ. ಅಲ್ಲದೇ ಬಡ ಕುಟುಂಬಕ್ಕೆ ಒಂದು ತಲೆಗೆ 7ಕೆಜಿ ಅಕ್ಕಿ, 3ಕೆಜೆ ರಾಗಿ ಕೊಡಲಾಗುತ್ತಿದೆ ಈ ಬಗ್ಗೆ ವಿರೋಧ ಪಕ್ಷ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ, ಪ.ಪಂ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್ ಇದ್ದರು.