ಅಭಿವೃದ್ದಿ ಸಹಿಸದೇ ಬಿಜೆಪಿಯವರಿಂದ ಸುಳ್ಳು ಆರೋಪ

ಆಲಮೇಲ:ಮಾ.6: ಸಿಂದಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ ಮನಗೂಳಿ ಅವರ ಅಭಿವೃದ್ದಿ ಕೆಲಸಗಳನ್ನು ಸಹಿಸಿಕೊಳ್ಳದೆ ಬಿಜೆಪಿಯವರು ಸುಳ್ಳು ಆರೋಪಗಳ ಮೂಲಕ ಪ್ರತಿಭಟನೆ ಹಮ್ಮಿಕೊಂಡಿರುವದು ತಿವ್ರವಾಗಿ ಖಂಡಿಸುತ್ತೆವೆ ಎಂದು ಆಲಮೇಲ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸಾಧೀಕ ಸುಂಬಡ ಹೆಳಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೆಳಿದ ಅವರು ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರರ ಅವಧಿಯಲ್ಲಿ 2022-23ನೇ ಸಾಲಿನ ಕೃಷ್ಣಾ ಭಾಗ್ಯ ಜಲ ನಿಗಮದ(ಎಸ್ ಸಿಪಿ/ಟಿ ಎಸ್ ಪಿ) ಯೋಜನೆ ಅಡಿಯಲ್ಲಿ ಮಂಜೂರಾಗಿರುವ 70 ಕೊಳವೆ ಬಾವಿಗಳನ್ನು ಹಾಲಿ ಶಾಸಕ ಅಶೋಕ ಮನಗೂಳಿಯವರು ರದ್ದುಗೊಳ್ಳಿಸಲು ಪತ್ರ ನಿಡಿ ಅರ್ಹ ಫಲಾನುಭವಿಗಳಿಗೆ ಅನ್ಯಾಯ ವೆಸಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಶೋಕ ಮನಗೂಳಿ ವಿರುದ್ದರ ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಬಿಜೆಪಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಈ ಪ್ರತಿಭಟನೆ ಸುಳ್ಳು ಪ್ರತಿಭಟನೆ ನಡೆಸುವ ಮೂಲಕ ಕ್ಷೇತ್ರದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
70 ಕೊಳವೆ ಬಾವಿಗಳ ಪೈಕಿ ಕೆಲವು ಬದಲಾವಣೆಗೆ ಮಾಡಲು ಹೇಳಿರಬಹುದು, ಆದರೆ ಸಂಪೂರ್ಣವಾಗಿ ರದ್ದು ಮಾಡಿಲ್ಲಾ, ಈ ತರಹ ಸುಳ್ಳು ಹೇಳುತ್ತ ಮಾಜಿ ಶಾಸಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ಶಾಸಕ ಅಶೋಕ ಮನಗೂಳಿಯವರು ಈ ಮತಕ್ಷೇತ್ರದ ಶಾಸಕರಾದ ನಂತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವದು ಇವರಿಗೆ ಸಹಿಸಲು ಆಗುತ್ತಿಲ್ಲಾ. ಕೊಳವೆ ಬಾವಿಯ ಫಲಾನುಭವಿಗಳ ಪಡಿಸಿರುವ ದಾಖಲಾತಿ ಇದ್ದರೆ ಸಾಬೀತು ಪಡಿಸಲ್ಲಿ. ಹಾಗೂ ಮಾಜಿ ಶಾಸಕ ರಮೇಶ ಭೂಸನೂರ ಅವರ ಅಧಿಕಾರ ಅವಧಿಯಲ್ಲಿ 5000 ಮನೆಗಳು ಈ ಮತಕ್ಷೇತ್ರಕ್ಕೆ ತಂದಿರುವುದಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ, ಈ ಕುರಿತು ದಾಖಲೆ ತೋರಿಸಲಿ ಮಾಜಿ ಶಾಸಕರು ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ಧಿ ಮಾಡುವವರಿಗೆ ಪ್ರೋತ್ಸಾಹಿಸುವಂತಹ ಕೆಲಸ ಮಾಡಲಿ ಎಂದು ಹೇಳಿದರು.
ಮುಖಂಡರಾದ ಸೋಮನಾಥ ಮೇಲಿನಮನಿ, ವಾಹಬ ಸುಂಬಡ, ಚನ್ನಯ್ಯ ರಾಂಪೂರಮಠ, ಬಶೀರ ತಾಂಬೋಳ್ಳಿ, ಶಶಿ ಗಣಿಹಾರ, ಭಾಗ್ಯವಂತ ಆಲಮೇಲಕರ, ಸಂತೋಷ ಜರಕರ, ಮಲ್ಲು ಅಚ್ಚಲೇರಿ, ದಯಾನಂದ ನಾರಾಯಣಕರ, ಹುಸೇನ ವಾಲೀಕಾರ,ಮಹಾದೇವಿ ವಡ್ಡರ, ಚಾಂದಸಾಬ ವಡಗೇರಿ ಮುಂತಾದವರು ಇದ್ದರು.