ಅಭಿವೃದ್ದಿ ಯೋಜನೆಯಲ್ಲಿ ಅಕ್ರಮ: ಕ್ರಮಕ್ಕೆ ಒತ್ತಾಯ-ಮಂಜುಶ್ರೀ

ರಾಯಚೂರು,ನ.೨- ಸರ್ಕಾರದಿಂದ ಲೈಂಗಿಕ ಅಲ್ಪಸಂಖ್ಯಾತ ಅಭಿವೃದ್ದಿಗಾಗಿ ರೂಪಿಸಿದ ಯೋಜನೆಗಳಲ್ಲಿ ನಡೆಯತ್ತಿರುವ ಅಕ್ರಮಗಳನ್ನು ತಡೆಯಬೇಕು ಮತ್ತು ತೃತಿಯ ಲಿಂಗ ಸಮುದಾಯದ ಜನರಿಗೆ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಒದಗಿಸಬೇಕೆಂದು ಲೈಂಗಿಕ ಅಲ್ಪಸಂಖ್ಯಾತರಾದ ಮಧುಶ್ರೀ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾರಾದ ತೃತಿಯ ಲಿಂಗಗಳ ಪರವಾಗಿ ಹಾಗೂ ಅವರ ಅಭಿವೃದ್ಧಿಗಾಗೆ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿ ಆಪ್ತಮಿತ್ರ ಸಂಘಟನೆಯ ಅಧ್ಯಕ್ಷ ಮತ್ತು ಯೋಜನಾ ವ್ಯವಸ್ಥಾಪಕರಿಂದ ಅಕ್ರಮವೆಸಲಾಗುತ್ತಿದ್ದು, ಉದ್ಯೋಗಿನಿ ಯೋಜನೆಯಡಿ ಸಮುದಾಯದವರ ಅಭಿವೃದ್ದಿಗೆ ಸಾಲ ಸೌಲಭ್ಯದಡಿ ಸಾಲ ಕೊಡಿಸುವುದಾಗಿ ಭರವಸೆ ನೀಡಿ ಲಂಚ ಪಡೆಯಲಾಗುತ್ತಿದೆ. ೨೦೧೪ ರಿಂದ ೨೦೨೦ರವರೆಗೆ ಮಂಜೂರಾದ ಸಾಲದ ಕುರಿತು ದಾಖಲೆ ಕೇಳಿದರೆ ನೀಡುತ್ತಿಲ್ಲ ಮತ್ತು ದೌರ್ಜನ್ಯ ಮಾಡಲು ಬರುತ್ತಿದ್ದಾರೆ ಎಂದರು.
ಏಡ್ಸ್ ರೋಗದಿಂದ ಲೈಂಗಿಕ ಅಲ್ಪಸಂಖ್ಯಾತರನ್ನು ರಕ್ಷಿಸಿ ಏಡ್ಸ್ ಮುಕ್ತರನ್ನಾಗಿ ಮಾಡಲು ಯೋಜನೆ ರೂಪಿಸಿದ್ದು, ಈ ಯೋಜನೆಯನ್ನು ಸರಿಯಾಗಿ ಜಾರಿಗೊಳಿಸದೆ ಸುಳ್ಳು ದಾಖಲೆ ಸೃಷ್ಠಿಸಿ ಅಧಿಕಾರಿಗಳು ಅಕ್ರಮವೆಸಗುತ್ತಿದ್ದಾರೆ. ಏಡ್ಸ್ ರೋಗದ ಕುರಿತು ಯಾವುದೇ ಪರೀಕ್ಷೆ ನಡೆಸದೆ ಕೇವಲ ಸಹಿ ಮಾಡಿ ದಾಖಲಾತಿ ನೀಡಲಾಗುತ್ತಿದೆ. ಈ ಎಲ್ಲಾ ಅಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ಕೂಡಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಂಜು, ಎಲ್ಲಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.