ಅಭಿವೃದ್ದಿ ಕೆಲಸಕ್ಕೆ ಮತದಾರ ಪ್ರಭುಗಳೆ ಸ್ಪೂರ್ತಿ

ಬೆಂಗಳೂರು, ಮಾ. ೧೭- ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಭೈರವೇಶ್ವರನಗರ ಮೂಡಲಪಾಳ್ಯ ವಾರ್ಡ್‌ನಲ್ಲಿ ಸರ್ಕಾರಿ ಶಾಲೆಗಳಿಗೆ ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆ ಮತ್ತು ಡಾ.ರಾಜ್‌ಕುಮಾರ್ ವಾರ್ಡ್ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಾರ್ಮಿಕ ಇಲಾಖೆ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಇನ್ನಿತರೆ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರುಗಳಿಗೆ ಸೌಲಭ್ಯ ವಿತರಣಾ ಸಮಾರಂಭ.
ಸ್ಥಳೀಯ ಶಾಸಕರು, ವಸತಿ ಸಚಿವರಾದ ವಿ.ಸೋಮಣ್ಣರವರು ಸ್ಯಾನಿಟರಿ ನ್ಯಾಪ್ ಕಿನ್ ಯಂತ್ರ ಮತ್ತು ಲೇಬರ್ ಕಾರ್ಡ್ ಮತ್ತು ಇ-ಶ್ರಾಮ್ ಕಾರ್ಡ್, ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಿದರು.ಜನರ ಪ್ರೀತಿ,ವಿಶ್ವಾಸ ಮತ್ತು ನಂಬಿಕೆಯಿಂದ ನಮ್ಮ ಸೋಮಣ್ಣ ಗೆಲ್ಲಬೇಕು ಹಾಗೂ ಕುಟುಂಬದ ಒಬ್ಬ ಸದಸ್ಯನಂತೆ ನನ್ನನು ನೋಡಿ ಮತ ನೀಡಿ ಗೆಲ್ಲಿಸಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ೧೦ವರ್ಷಗಳ ಅಭಿವೃದ್ದಿ ಕಾಣದೇ ಜನರು ಮೂಲಭೂತ ಸೌಲಭ್ಯ ಸಿಗದೇ ಸಂಕಷ್ಟದಲ್ಲಿ ಇದ್ದರು.
ಇಂದು ನಾನು ಶಾಸಕನಾಗಿ ಐದು ವರ್ಷದ ಆಡಳಿತ ಅವಧಿಯಲ್ಲಿ ಕಂಡು ಕೇಳರಿಯದ ಅಭಿವೃದ್ದಿಯಾಗಿದೆ. ಇದಕ್ಕೆ ಸ್ಪೂರ್ತಿ, ಪ್ರೇರಕ ಶಕ್ತಿ ಎಂದರೆ ನಮ್ಮ ಮತದಾರ ಪ್ರಭುಗಳು. ಜನರ ಕೊಟ್ಟ ಕುದುರೆ, ಯಶ್ವಸಿಯಾಗಿ ಹತ್ತಿದ್ದೇನೆ ಸೇರುವ ಮಾರ್ಗ ತಲುಪಿಸಿದ್ದೇನೆ .
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರೆಫರಲ್ ಆಸ್ಪತ್ರೆ, ೪೦ಕ್ಕೂ ಹೆಚ್ಚು ಉದ್ಯಾನವನಗಳ ನವೀಕರಣ, ಅಂತರಾಷ್ಟ್ರೀಯ ಗುಣಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ಬಿ.ಜಿ.ಎಸ್.ಆಟದ ಮದಾನ ಮತ್ತು ೭೦ಕ್ಕೂ ಹೆಚ್ಚು ಕುಡಿಯುವ ನೀರಿನ ಘಟಕ, ಹೈಟೆಕ್ ಶಾಲೆಗಳು, ಇದೇ ತಿಂಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕರ್ಪಣೆಯಾಗಲಿದೆ ಎಂದು ಹೇಳಿದರು.
ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್, ಕೆ.ಉಮೇಶ್ ಶೆಟ್ಟಿ, ದಾಸೇಗೌಡ ಮತ್ತು ಸಂಘಟನೆಯ ದೇವರಾಜ್, ಶ್ರೀನಿವಾಸ್ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.