ಅಭಿವೃದ್ದಿ ಕಾರ್ಯಗಳನ್ನು- ಪಂಚರತ್ನ ಯೋಜನೆ ಮತದಾರರಿಗೆ ಮನವರಿಕೆ ಮಾಡಿ

ಸಿರವಾರ.ಏ.ಂ೬- ಕಳೇದ ೪.೮ ವರ್ಷದಲ್ಲಿ ಜೆಡಿಎಸ್ ಸರ್ಕಾರ ಇಲ್ಲದೆ ಇದರೂ ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಇವನೂ, ಪಂಚರತ್ನ ಯೋಜನೆ ಮತದಾರರಿಗೆ ತಿಳಿಸಿ ಮತ್ತೆ ರಾಜಣ್ಣ ಶಾಸಕರಾಗಲು ಎಲ್ಲಾರೂ ಶ್ರಮಿಸೋಣ ಎಂದು ಜೆಡಿಎಸ್ ಯುವನಾಯಕ ಹಾಗೂ ಶಾಸಕರ ಸಹೋದರ ರಾಜಾ ಆದರ್ಶನಾಯಕ ಹೇಳಿದರು. ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿ ೨೦೧೮ ರ ಚುನಾವಣೆಯಲ್ಲಿ ವೆಂಕಟಪ್ಪ ನಾಯಕರಿಗೆ ಅದಿಕ ಮತಗಳಿಂದ ಗೆಲಿಸಿದಿರಿ, ೧ ವರ್ಷ ಮಾತ್ರ ಸಮೀಶ್ರ ಸರ್ಕಾರದಲ್ಲಿ ಅಭಿವೃದ್ದಿ ಕೆಲಸಗಳು ಆಗಿದವು, ನಂತರ ಬಿಜೆಪಿ ಸರ್ಕಾರದಲ್ಲಿ ಅನುದಾನ ನೀಡುವಲಿ ಮಲತಾಯಿ ದೋರಣೆ ಅನುಸರಿಸುತ್ತಿದ್ದರೂ, ಆದರೂ ಛಲ ಬೀಡದೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು, ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ಒದಗಿಸಿ ಎರಡು ಬೆಳೆ ಬೆಳೆಯುವಂತಾಗಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಸ್ಪಷ್ಟ ಬಹುಮತ ಬಂದರೆ ಜಾರಿಗೆ ತರಲು ಉದೇಶಿಸಿರುವ ಪಂಚರತ್ನ ಯೋಜನೆಗಳನ್ನು ಮತದಾರರಿಗೆ ತಿಳಿಸಿ ಮಾನ್ವಿಗೆ ರಾಜಣ್ಣ, ರಾಜ್ಯಕ್ಕೆ ಕುಮಾರಣ್ಣ ಆಯ್ಕೆಯಾಗವಂತೆ ಮಾಡೊಣ ಎಂದರು. ನಂತರ ಸುಮಾರು ೫೦ ಕ್ಕೂ ಅದಿಕ ಜನ ಕಾಂಗ್ರೇಸ್, ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ಹಿಂದುಳಿದ ವರ್ಗಗಳ ತಾಲೂಕ ಅಧ್ಯಕ್ಷ ಎಂ.ಡಿ. ವಲಿಸಾಬ ಗುತ್ತೇದಾರ್,ಪ.ಪಂ ಮಾಜಿ ಸದಸ್ಯ ಇಮಾಮ್, ಯಲ್ಲಪ್ಪ ದೊರೆ, ಸತ್ತರ್ ಸಾಬ್ ಗುತ್ತೇದಾರ್, ಉಸೇನ್ ಬಾಷಾ ಸೇರಿದಂತೆ ಇನ್ನಿತರರು ಇದ್ದರು