ಅಭಿವೃದ್ದಿ ಕಾಮಗಾರಿ 15 ದಿನದೊಳಗಾಗಿ ಪೂರ್ಣಗೊಳಿಸಲು ಸೂಚನೆ 

ಜಗಳೂರು.: ನಾನು ಶಾಸಕನಾಗಿದ್ದ ಆಡಳಿತಾವಧಿಯಲ್ಲಿ ಕೈಗೊಂಡಿರುವ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿ ಗಳನ್ನು ಇನ್ನು 15 ದಿನದೊಳಗಾಗಿ ಪೂರ್ಣಗೊಳಿಸಬೇಕು ನಿರ್ಲಕ್ಷ್ಯ ವಹಿಸಿದರೆ ತಾಲೂಕಿನಿಂದ ಕೋಕ್ ನೀಡಲಾಗುವುದು ಎಂದು ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳಿಗೆ ಶಾಸಕ ಎಸ್.ವಿ.ರಾಮಚಂದ್ರ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಭದ್ರಾಮೇಲ್ದಂಡೆ ಯೋಜನೆ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರುಗಳು ಆಗಮಿಸುವದರಿಂದ ಕೈಗೊಂಡ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಲೊಕಾರ್ಪಣೆಗೊಳ್ಳಬೇಕು ಎಂದು ಹೇಳಿದರು.ಇಂದಿನ ತ್ರೈಮಾಸಿಕ ಸಭೆಗೆ ಕೆಲ ತಾಲೂಕು ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು  ಗೈರಾಗಿದ್ದು. ಸಭೆಗೆ ಆಗಮಿಸಿಲ್ಲ ಮತ್ತೊಂದು ಬಾರಿ ಕಡ್ಡಾಯವಾಗಿ ಅಧಿಕಾರಿಗಳನ್ನು ಸಭೆಗೆ ಕರೆಯಲು ಪ್ರಭಾರಿ ತಾ.ಪಂ ಇ.ಓ ಚಂದ್ರಶೇಖರ್ ಗೆ ತಾಕೀತು ಮಾಡಿದರು.ನನ್ನ ಆಡಳಿತಾವಧಿಯಲ್ಲಿ ಅಧಿಕಾರಿಗಳು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಉತ್ತಮ ಸಹಕಾರ ನೀಡಿದ್ದು.ತಮಗೆ ಚಿರ ಋಣಿಯಾಗಿರುವೆ.ಜನಪ್ರತಿನಿಧಿಗಳು ಇಲ್ಲದವೇಳೆ ಚುನಾವಣೆ ಮುಕ್ತಾಯದವರೆಗೆ ತಾವುಗಳು ಇದೇ ರೀತಿಯಲ್ಲಿ ಸಾರ್ವಜನಿಕರಿಗೆ,ಕೂಲಿಕಾರ್ಮಿಕ,ರೈತಾಪಿ ವರ್ಗಕ್ಕೆ  ಅಲೆದಾಡಿಸದೆ ಸೌಲಭ್ಯ ಕಲ್ಪಿಸಬೇಕು.ಅಲ್ಲದೆ ಚುನಾವಣೆಯಲ್ಲಿ ಯಾರೊಬ್ಬ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸದೆ ಶಾಂತಿಯುವ ಚುನಾವಣೆ ನಡೆಸಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ತಾ.ಪಂ ಪ್ರಭಾರಿ ಇಓ ಚಂದ್ರಶೇಖರ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ,ಲೊಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ತೋಟಗಾರಿಕೆ ಇಲಾಖೆ  ವೆಂಕಟೇಶ್ ಮೂರ್ತಿ.ಕೃಷಿ ಇಲಾಖೆ  ಮಿಥುನ್ ಕೀಮಾವತ್. ಹಿಂದುಳಿದ ವರ್ಗಗಳ ಇಲಾಖೆ ಅಸ್ಮಾ ಬಾನು.ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.