ಅಭಿವೃದ್ದಿಯೇ ನಮ್ಮ ಗುರಿ

ಕಲಬುರಗಿ:ಸೆ.21: ನಗರದ ಸದಾಶಿವ ನಗರ, ಗಾಬರೇ ಲೇಔಟ್, ನವಜೀವನ ನಗರ,ಮೋಹನ್ ನಗರಗಳ ನಾಲ್ಕು ಬಡಾವಣೆಗಳ ವತಿಯಿಂದ ಸದಾಶಿವ ನಗರದ ಶ್ರೀ ಗಣೇಶ ಮಂದಿರದಲ್ಲಿ ಪ್ರತಿಷ್ಟಾಪಿಸಿರುವ ಗಣೇಶ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕೆ ಸಚಿವರಾದ ಶ್ರೀ ಶರಣಬಸಪ್ಪಗೌಡಾ ದರ್ಶನಾಪುರ ಅವರು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಹತ್ತನೆಯ ತರಗತಿ ಮತ್ತು ದ್ವೀತಿಯ ಪಿ.ಯು.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದ ಬಡಾವಣೆಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಬದುಕಿನಲ್ಲಿ ಸುಂದರ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು .
ಮುಂದುವರೆದು ಮಾತನಾಡಿದ ಅವರು ನಮ್ಮ ಸರಕಾರದ ಮುಖ್ಯ ಗುರಿ ಅಭಿವೃದ್ಧಿಯಾಗಿದ್ದು ನಾವು ಯಾವತ್ತಿಗೂ ಅಭಿವೃದ್ಧಿಯ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಹೇಳುತ್ತಾ ಈ ನಾಲ್ಕು ಬಡಾವಣೆಗಳ ಮೂಲಭೂತ ಸೌಕರ್ಯಗಳಾದ ರಸ್ತೆ ,ಚರಂಡಿ,ಬೀದಿ ದೀಪಗಳ ಅಳವಡಿಕೆ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಕೆಲವೇ ದಿನಗಳಲ್ಲಿ ಪ್ರಾರಂಭಿಸುವುದಾಗಿ ಹೇಳುತ್ತಾ ಉತ್ಸವ ಸಮಿತಿಯವರು ಹಮ್ಮಿಕೊಂಡ ಇಂತಹ ಸಮಾಜಮುಖಿ ಕಾರ್ಯಕ್ರಮ ಶ್ಲಾಘನೀಯ ಎಂದು ನುಡಿದರು.
ವೇದಿಕೆಯ ಮೇಲೆ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಯಲ್ಲಪ್ಪಾ ನಾಯ್ಕೋಡಿ,ಗಣೇಶ ಮಂಡಳಿಯ ಅಧ್ಯಕ್ಷರಾದ ಶ್ರೀ ಹಾವೇಂದ್ರ ಪುಣ್ಯಶೆಟ್ಟಿ, ಸದಸ್ಯರಾದ ಶ್ರೀ ಲಕ್ಷ್ಮೀ ಕಾಂತ ಪಲ್ಲಾ ,ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಬಡಾವಣೆಗಳ ಹಿರಿಯರಾದ ಶ್ರೀ ಗಂಗಾಧರ ಡೋಣಿ,ಶ್ರೀ ನರಸಪ್ಪ ತಂಬೂರಿ,ಶ್ರೀ ಮಲ್ಲಿಕಾರ್ಜುನ ಸ್ವಾಮಿ,ಡಾ.ರಾಜೇಂದ್ರ ಕೊಂಡಾ,ಶ್ರೀ ವಿನೋದ ಬಂದರವಾಡ,ಶ್ರೀಸುಭಾಶ ಮೋತಕಪಲ್ಲಿ,ಡಾ.ಅಮರನಾಥ ಮುದ್ದಾ,ಶ್ರೀ.ಸಿ.ಎನ್.ಸುಲೇಪೇಟಕರ,ಶ್ರೀ ಶಿವಶರಣಪ್ಪ ರಾಯಕೋಟಿ,ಶ್ರೀ ನಾಗೇಂದ್ರ ಪಾಟೀಲ ಶ್ರೀ ಚನ್ನಬಸಪ್ಪಾ ಸಮಾನೆ, ಶ್ರೀ ಶರಬಣ್ಣ ದಿದ್ದಿ,ಶ್ರೀ ಸತ್ಯಶೀಲರಡ್ಡಿ ಪಲ್ಲಾ ,ಶ್ರೀ ರಾಮು ರಾಠೋಡ ,ಪಾಲ್ಗೊಂಡಿದ್ದರು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ವಿವೇಕಾನಂದ ಸ್ವಾಮಿ ಅವರ ನೇತ್ರತ್ವದಲ್ಲಿ ಪೂಜಾ ಕಂಕರ್ಯಗಳನ್ನು ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಗಣೇಶನನ್ನು ಅಂದವಾಗಿ ಅಲಂಕರಿಸಿದ ಬಡಾವಣೆಯ ಮಹಿಳೆಯರನ್ನು ಹಾಗೂ ಮೂರು ದಿನಗಳ‌ಕಾಲ ಪ್ರಸಾದ ವ್ಯವಸ್ಥೆ ಮಾಡಿದ ಮಹನೀಯರನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು .ಶ್ರೀ ಮಲ್ಲು ಮಲ್ಲಾಬಾದಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ, ಹಾಗೂ ಹಾಸ್ಯ ಕಲಾವಿದರಾದ ಶ್ರೀ ಗುಂಡಣ್ಣ ಡಿಗ್ಗಿ ,ಅವರಿಂದ್ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.
ಶ್ರೀ ದತ್ತು ಇವರು ಕಾರ್ಯಕ್ರಮ ನಿರ್ವಹಿಸಿದರು ,ಡಾ.ಮಹೇಶ ಗಂವ್ಹಾರ ಸ್ವಾಗತಿಸಿದರು,ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಪಿ.ಡಿ.ಕುಲಕರ್ಣಿ ವಂದಿಸಿದರು.