ಹೊಸ ಪ್ರತಿಭೆಗಳು ನಟಿಸಿರುವ “ಅಭಿರಾಮಚಂದ್ರ” ಮುಂದಿನ ತಿಂಗಳ ಮೊದಲ ವಾರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಟ್ರೈಲರ್ ಅನ್ನು ಪ್ರಮೋದ್ ಶೆಟ್ಟಿ ಹಾಗು ದಿಯಾ ದೀಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿ ಶುಭ ಹಾರೈಸಿದರು
ಈ ವೇಳೆ ಮಾತಿಗಿಳಿದ ನಿರ್ದೇಶಕ ನಾಗೇಂದ್ರ ಗಾಣಿಗ, ಮೊದಲ ಸಿನಿಮಾ , ಚಿತ್ರ ಆಗಲು ಅಕ್ಕ ಕಾರಣ,ಪ್ರೀತಿಗಾಗಿ ಸಿನಿಮಾ ಮಾಡಿದ್ದೇವೆ. ಕುಂದಾಪುರ,ಮಂಡ್ಯ ಮತ್ತು ಉತ್ತರ ಕರ್ನಾಟಕದ ಮೂರು ಹುಡುಗರು ಬೆಂಗಳೂರಿನಲ್ಲಿ ಒಂದೇ ರೂಮಿನಲ್ಲಿ ಇರುತ್ತಾರೆ. ಅಭಿ ರಂಗಕರ್ಮಿ, ರಾಮ ಕ್ಯಾಬ್ ಚಾಲಕ, ಚಂದ್ರ ಹೋಟೆಲ್ ಕ್ಯಾಶಿಯರ್, ಎಲ್ಲವೂ ಕಾಲ್ಪನಿಕ ಪಾತ್ರ. ಒಂದೇ ಹುಡುಗಿ, ಕುಂದಾಪುರ, ಮಂಡ್ಯ,ಚಿಕ್ಕಬಳ್ಳಾಪುರ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ ಎನ್ನುವ ಮಾಹಿತಿ ನೀಡಿದರು.
ನಾಯಕ ಕಮ್ ನಿರ್ಮಾಪಕ ರಥಕಿರಣ್, ಆಯುರ್ವೇದ ಡಾಕ್ಟರ್. ಅಪ್ಪು ಅಲೆಯಾಗಿ ಬಾ ಆಲ್ಬಂ ಹಾಡು ಬಿಡುಗಡೆ ಮಾಡಿದ್ದೆ. ಸಿನಿಮಾ ಮಾಡಲು ಸಿಂಪಲ್ ಸುನಿ, ತಂದೆ, ರವಿ ಬಸ್ರೂರು ಬೆಂಬಲಿ ನೀಡಿದ್ದಾರೆ. ಚಿತ್ರದಲ್ಲಿ ನಾನು ಅಭಿ ಪಾತ್ರ ಮಾಡಿದ್ದೇನೆ. ಅಕ್ಟೋಬರ್ 6ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದರು
ನಾಯಕ ಸಿದ್ದು ಮೂಲಿಮನಿ, ಮನಸ್ಸಿಗೆ ಹತ್ತಿರವಾದ ಚಿತ್ರ,ಪ್ರೀತಿಗಾಗಿ ಸಿನಿಮಾ ಮಾಡಿದ್ದೇವೆ. ರಾಮ, ಮಂಡ್ಯ ಹುಡುಗನ ಪಾತ್ರ ಎಂದರೆ ನಾಟ್ಯರಂಗ, ಉತ್ರರ ಕರ್ನಾಟಕದ ಹುಡುಗನ ಪಾತ್ರ ಎಂದರು.
ನಾಯಕಿಯಾಗಿ ಶಿವಾನಿ ರೈ ಉತ್ತಮ ಪಾತ್ರ ಸಿಕ್ಕಿದೆ ಎಂದು ಮಾಹಿತಿ ಹಂಚಿಕೊಂಡರು. ಚಿತ್ರದಲ್ಲಿ ಎಸ್. ನಾರಾಯಣ್, ಪ್ರಕಾಶ್ ತುಮ್ಮಿನಾಡು, ವೀಣಾ ಸುಂದರ್, ಸುಂದರ್ ವೀಣಾ ಮತ್ತಿತರಿದ್ದಾರೆ.