ಅಭಿಯಾನ ಕಾರ್ಯಕ್ರಮ

ಸತ್ತೂರು,ಏ2 : ಶ್ರೀಮನ್ ಮದ್ವಾಚಾರ್ಯ ಮೂಲ ಸಂಸ್ಥಾನ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಹಾಗೂ ಆಜ್ಞೆಯಿಂದ ಭಾರತದಾದ್ಯಂತ ಹಮ್ಮಿಕೊಂಡಿರುವ ಶ್ರೀಮದ್ ಭಗವದ್ಗೀತಾ ಅಭಿಯಾನ 11ನೇ ಅಧ್ಯಾಯವಾದ, ವಿಶ್ವರೂಪ ದರ್ಶನ ಯೋಗ – ಅಭಿಯಾನ ಕಾರ್ಯಕ್ರಮವನ್ನು ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ವನಸಿರಿ ನಗರದಲ್ಲಿರುವ ಶ್ರೀ ಕೃಷ್ಣ ಹುನಗುಂದ ಅವರ ನಿವಾಸದಲ್ಲಿ ದಿನಾಂಕ 5 ಮತ್ತು 6 ರಂದು ಸಾಯಂಕಾಲ 6-00 ರಿಂದ 7-00ರ ವರೆಗೆ ನಡೆಯಲಿದೆ. ವಿಶೇಷ ಉಪನ್ಯಾಸಕರಾಗಿ ಹುಬ್ಬಳ್ಳಿಯ ಪಂ. ವಾಗಿಶಾಚಾರ್ಯ ರಾಜಪುರೋಹಿತ ಆಗಮಿಸಲಿದ್ದಾರೆ. ಇದಕ್ಕೂ ಪೂರ್ವ ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಬಳಗದ ಸದಸ್ಯರಿಂದ ಹರಿವಾಯು ಗುರುಗಳ ಪಾರಾಯಣಾದಿಗಳು ನಡೆಯಲಿದೆ. ಸಕಲ ಸದ್ಭಕ್ತರು ಸಕಾಲಕ್ಕೆ ಆಗಮಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 63 61 83 57 10ನ್ನು ಸಂಪರ್ಕಿಸಲು, ಬಳಗದ ಕಾರ್ಯದರ್ಶಿ ರಘೋತ್ತಮ ಅವಧಾನಿಯವರು ತಿಳಿಸಿದ್ದಾರೆ.