ಅಭಿಮಾನ ಬಳಗದಿಂದ ಹುಟ್ಟುಹಬ್ಬ ಆಚರಣೆ ಸಂತೋಷ ತಂದಿದೆ

ರಾಯಚೂರು,ಮಾ.೦೭- ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅವರ ೫೭ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆಯ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಹಾಂತೇಶಪಾಟೀಲ್ ಮಾತನಾಡಿ, ನನ್ನ ಹುಟ್ಟುಹಬ್ಬವನ್ನು ಅಭಿಮಾನ ಬಳಗ ವಂತಿಯಿಂದ ಆಚರಣೆ ಮಾಡುವದು ಸಂತೋಷ ವಿಷಯ. ಇದಕ್ಕೆ ನಾನು ಚಿರಋಣಿ ಮುಂದಿನ ದಿನಗಳಲ್ಲಿ ಪಕ್ಷ ಬಲಿಷ್ಠಗೊಳಿಸುವ ಕೆಲಸ ಮಾಡೋಣ ಎಂದರು.
ಎಂ. ವಿರುಪಾಕ್ಷಿ ಜಿಲ್ಲಾ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರು ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರಿಗೆ ದೇವರ ಇನ್ನೂ ಆರೋಗ್ಯ, ಆಯಸ್ಸು ಕೊಡಲಿ ಎಂದು ಹಾರೈಸುತ್ತನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ ವಕೀಲರ, ಈ. ವಿನಯಕುಮಾರ, ನರಸಿಂಹ ನಾಯಕ ಪವನಕುಮಾರ, ಹಿರಿಯ ಮುಖಂಡ ಯೂಸಫ್ ಖಾನ್, ರಾಮನಗೌಡ ಲಕ್ಷೀಪತಿ ಗಾಣದಾಳ ಮಾತನಾಡಿದರು.
ನಗರ ಅಧ್ಯಕ್ಷ ಬಿ. ತಿಮಾರೆಡ್ಡಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಜಿಲ್ಲಾ ಪರಿಶಿಷ್ಟ ಅಧ್ಯಕ್ಷ ವಿಶ್ವನಾಥ ಪಟ್ಟಿ, ಹಿಂದುಳಿದ ಅಧ್ಯಕ್ಷ ಜಂಬುನಾಥ ಯಾದವ, ಈರಣ್ಣ ಯಾದವ, ಆದಿರಾಜಾ, ನರಸಪ್ಪ ಆಶಾಪೂರ, ಪಾರ್ಥ, ಅತಿಕ್ ನರಸಿಂಹಲು, ಕೆ. ಅಂಜಿನಯ್ಯ, ನರಸಿಂಹಲು ಇಂದಿರಾನಗರ, ರವಿಕುಮಾರ, ಸುಧಾಕರ ಗೌಡ, ಅವಿಲ್ ಅಮಿತ್ ಸುಂಕಾರಿ, ಕುಮಾರಸ್ವಾಮಿ, ವಿಶ್ವನಾಥ ಪಾಟೀಲ್, ಮಾರೆಪ್ಪ, ಪ್ರಕಾಶ ಉಪಸ್ಥಿತರಿದ್ದರು.