ಅಭಿಮಾನಿ ಬಳಗದಿಂದ ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ ಆಚರಣೆ

ಕಲಬುರಗಿ,ನ 23: ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿಮಾನಿ ಬಳಗದಿಂದ ಪ್ರಿಯಾಂಕ್ ಖರ್ಗೆ ಅವರ 45 ನೇ ಜನ್ಮದಿನವನ್ನು ಜನಪ್ರತಿನಿಧಿಗಳು,ಕಾಂಗ್ರೆಸ್ ಮುಖಂಡರು,ಅಭಿಮಾನಿಗಳು ಹಿತೈಷಿಗಳ ಸಮ್ಮುಖದಲ್ಲಿ 45 ಕೆಜಿ ತೂಕದ ಬೃಹತ್ ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಪ್ರಿಯಾಂಕ್ ಖರ್ಗೆ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕ ಕ್ರಿಕೆಟ್ ಕಪ್ ಸ್ಪರ್ಧೆಯಲ್ಲಿ ರಾಯಲ್ ಚಾಲೆಂಜರ್ಸ-43 ತಂಡವು ಟ್ರೋಫಿಯೊಂದಿಗೆ 1.50 ಲಕ್ಷ ರೂ ಬಹುಮಾನ ಪಡೆಯಿತು.ಟೀಮ್ ಯುನಿಟಿ ತಂಡವು ರನ್ನರ್ ಅಪ್ ಆಗಿ 75 ಸಾವಿರ ರೂ ಬಹುಮಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಚಿತ್ರನಟ ಲವ್ಲಿ ಸ್ಟಾರ್ ಪ್ರೇಮ್ ಪಾಲ್ಗೊಂಡರು.ಈ ಸಂದರ್ಭದಲ್ಲಿ ಒಂದು ಸಾವಿರ ಪೌರ ಕಾರ್ಮಿಕರಿಗೆ ಸೀರೆ, ಬಟ್ಟೆಗಳನ್ನು ವಿತರಿಸಲಾಯಿತು. ಶ್ರವಣದೋಷವುಳ್ಳ ಮಕ್ಕಳಿಗೆ ಶ್ರವಣಸಾಧನ,ಬೆಚ್ಚನೆಯ ಹೊದಿಕೆಗಳ ವಿತರಣೆ, ಪತ್ರಿಕಾ ವಿತರಕರಿಗೆ ಸ್ವೆಟರ್ ಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು ಹತ್ತಕ್ಕೂ ಹೆಚ್ಚು ಜನ ಸಾಧಕರನ್ನು ಸಹ ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ,ಕನೀಜ್ ಫಾತಿಮಾ,ಜಗದೇವ ಗುತ್ತೇದಾರ,ಡಾ.ಭೀಮಾಶಂಕರ ಬಿಲಗುಂದಿ, ಪ್ರವೀಣ ಪಾಟೀಲ ಹರವಾಳ, ಮಜರ್ ಆಲಂಖಾನ್, ಡಾ. ಕಿರಣ ದೇಶಮುಖ, ಫಾರೂಕ್ ಹುಸೇನ್ ಮನಿಯಾಲ, ಸಿದ್ಧಾರ್ಥ ಕೋರವಾರ, ರಾಜೀವ ಜಾನೆ , ಶಿವಾನಂದ ಹೊನಗುಂಟಿ,ಸಂತೋಷ ಪಾಟೀಲ ದಣ್ಣೂರ,ಈರಣ್ಣ ಝಳಕಿ,ರಾಜಗೋಪಾಲರೆಡ್ಡಿ,ಹಣಮಂತ ಒಂಟಿ,ಸವಿತಾ ಹಣಮಂತ ಒಂಟಿ,ಶಿವಾನಂದ ಪಾಟೀಲ ಮರತೂರ,ಸಂತೋಷ ಬಿಲಗುಂದಿ,ಓಯಸ್ ಶೇಖ್,ಅರುಣಕುಮಾರ ಪಾಟೀಲ,ಖುಸ್ರೊ ಜಾಗೀರದಾರ,ಅಶ್ವಿನ್ ಸಂಕಾ,ಪರಶುರಾಮ,ಪ್ರಕಾಶ ಕಪನೂರ,ಅಲಿಂಖಾನ್,ಜಾವೇದ್,ಚಂದ್ರಿಕಾ ಪರಮೇಶ್ವರ,ಲತಾ ರವಿ ರಾಠೋಡ,ಅನುಪಮಾ ಕಮಕನೂರ,ಪ್ರಕಾಶ ಕಮಕನೂರ,ಅಶೋಕ ವೀರನಾಯಕ,ವಾಣಿಶ್ರೀ ಸಗರಕರ,ಆನಂದ ನಂದೂರಕರ್ ಸೇರಿದಂತೆ ಅನೇಕರು ಪಾಲ್ಗೊಂಡರು.ಡಾ.ಕಿರಣ ದೇಶಮುಖ,ಮಂಜುನಾಥ ಹಿರೊಳ್ಳಿ ಕಾರ್ಯಕ್ರಮ ನಿರೂಪಿಸಿದರು.