ಅಭಿಮಾನಿಗಳ ಹೃದಯ ಗೆದ್ದ ಆಲಿಯಾ ಭಟ್ಟ್ ರ ಹೊಸ ಫೋಟೋ

ಆಲಿಯಾ ಭಟ್ಟ್ ಅವರ ಇತ್ತೀಚಿನ ಹೊಸ ಫೋಟೋ ಸುದ್ದಿಯಾಗಿದೆ. ಬಿಟೌನ್‌ನ ಜನಪ್ರಿಯ ನಟಿ ಆಲಿಯಾ ಭಟ್ಟ್ ಮದುವೆಯಾದ ಕೆಲವು ತಿಂಗಳ ನಂತರ ತಮ್ಮ ಗರ್ಭಧಾರಣೆಯ ಸುದ್ದಿ ತಿಳಿಸಿ ಆ ಅವಧಿಯನ್ನು ವಿವಿಧ ರೀತಿಯಲ್ಲಿ ಆನಂದಿಸುತ್ತಿದ್ದಾರೆ. ಆದರೆ ಆಲಿಯಾ ಭಟ್ಟ್ ತನ್ನ ಮೊದಲ ಗರ್ಭಾವಸ್ಥೆಯಲ್ಲಿ ಮನೆಯಲ್ಲಿ ಕುಳಿತುಕೊಳ್ಳುವುದಾಗಲಿ ಅಥವಾ ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕೆಂದಾಗಲಿ ಯೋಚಿಸುತ್ತಿಲ್ಲ. ಈ ಸಮಯದಲ್ಲಿ ನಟಿ ತನ್ನ ಮುಂಬರುವ ಫಿಲ್ಮ್ ’ಡಾರ್ಲಿಂಗ್ಸ್’ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದ ಸಮಯದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಆಲಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಇದೀಗ ಆಲಿಯಾರ ಹೊಸ ಲುಕ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ವಾಸ್ತವವಾಗಿ, ಇತ್ತೀಚೆಗೆ ಆಲಿಯಾ ಭಟ್ಟ್ ತನ್ನ ಇನ್ಸ್ಟ್ರಾ ಗ್ರಾಮ್ ಖಾತೆಯಿಂದ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಲಿಯಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆಲಿಯಾ ಹಳದಿ ಬಣ್ಣದ ಶಾರ್ಟ್ ಬಲೂನ್ ಡ್ರೆಸ್ ಧರಿಸಿದ್ದು, ಅದಕ್ಕೆ ಹಾಲ್ಟರ್ ನೆಕ್ ನೀಡಲಾಗಿದೆ. ಆಲಿಯಾ ತುಂಬಾ ಲೈಟ್ ಮೇಕಪ್ ಮಾಡಿದ್ದು, ಮಧ್ಯ ಭಾಗ ಪೋನಿಟೇಲ್ ಮಾಡಿರುವುದು ಈ ಫೋಟೋಗಳಿಂದ ಸ್ಪಷ್ಟವಾಗಿದೆ. ಇದರೊಂದಿಗೆ ಆಲಿಯಾ ಪಿಂಕ್ ಕಲರ್ ಹೀಲ್ಸ್ ಗೆ ಜೋಡಿಯಾಗಿದ್ದಾರೆ. ಗರ್ಭಾವಸ್ಥೆಯ ಬೆಳಕು ಆಲಿಯಾರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಆಲಿಯಾ ಭಟ್ಟ್ ತಮ್ಮ ’ಡಾರ್ಲಿಂಗ್ಸ್’ ಫಿಲ್ಮ್ ನ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ ಈ ನೋಟವನ್ನು ಕಾಣಿಸಿದ್ದಾರೆ. ತಾಯಿ ಸೋನಿ ರಜ್ದಾನ್ ಕೂಡ ಆಲಿಯಾ ಅವರ ಈ ಫಿಲ್ಮ್ ಗಳ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಆಲಿಯಾ ಪೋಸ್ಟ್‌ಗೆ ಅಭಿಮಾನಿಗಳು ಪ್ರೀತಿಯನ್ನು ಸುರಿಸುತ್ತಿದ್ದಾರೆ. ಕೆಲವು ಅಭಿಮಾನಿಗಳು ಅವರು ಹೀಲ್ಸ್ ಧರಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಕಾಮೆಂಟ್‌ಗಳಲ್ಲಿ ಹೀಲ್ಸ್ ಧರಿಸದಂತೆ ಸಲಹೆ ನೀಡಿದ್ದಾರೆ.
’ಡಾರ್ಲಿಂಗ್’ನ ತಾರಾಗಣದಲ್ಲಿ ಆಲಿಯಾ ಭಟ್ಟ್ ಶೆಫಾಲಿ ಶಾ, ವಿಜಯ್ ವರ್ಮಾ ಮತ್ತು ರೋಷನ್ ಮ್ಯಾಥ್ಯೂ ಇದ್ದಾರೆ. ’ಡಾರ್ಲಿಂಗ್’ ಆಗಸ್ಟ್ ೫, ೨೦೨೨ ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ .
ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿರುವ ಈ ಫಿಲ್ಮ್ ನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಆಲಿಯಾ ಜೊತೆಗೆ ನಿರ್ಮಿಸಿದೆ.

ರಣವೀರ್ ಸಿಂಗ್ ರ ಫೋಟೋಶೂಟ್‌ನಲ್ಲಿ ಆಲಿಯಾ ಭಟ್ಟ್ ರ ಪ್ರತಿಕ್ರಿಯೆ:

ರಣವೀರ್ ಸಿಂಗ್ ಫೋಟೋಶೂಟ್ ಕುರಿತು ದಿನಕ್ಕೊಬ್ಬರು ಬಾಲಿವುಡ್ ನಟಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆಲಿಯಾ ಭಟ್ಟ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚೆಗಷ್ಟೇ ಈ ನಟ ನಗ್ನ ಫೋಟೋ ಶೂಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದರು. ನಟನ ಈ ಕಾರ್ಯಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಅವರು ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಈ ನಡುವೆ ಆಲಿಯಾ ಭಟ್ಟ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ವಾಸ್ತವವಾಗಿ ಆಲಿಯಾ ಭಟ್ಟ್ ಅವರು ತಮ್ಮ ವೆಬ್ ಫಿಲ್ಮ್ ’ಡಾರ್ಲಿಂಗ್ಸ್’ ನ ಟ್ರೇಲರ್ ಬಿಡುಗಡೆಗೆ ಆಗಮಿಸಿದ್ದರು. ಈ ಸಮಯದಲ್ಲಿ ರಣವೀರ್ ಸಿಂಗ್ ಅವರ ಇತ್ತೀಚಿನ ಫೋಟೋಶೂಟ್ ಕುರಿತು ಅವರನ್ನು ಪ್ರಶ್ನಿಸಲಾಯಿತು. ಈ ಶೂಟಿಂಗ್ ಬಗ್ಗೆ ರಣವೀರ್ ಸಿಂಗ್ ನಿರಂತರವಾಗಿ ನಕಾರಾತ್ಮಕ ವಿಷಯಗಳನ್ನು ಕೇಳುತ್ತಿದ್ದಾರಲ್ಲ..? ಎಂದು ಆಲಿಯಾ ಅವರನ್ನು ಕೇಳಲಾಯಿತು. ’ಇದರ ಬಗ್ಗೆ ನಿಮ್ಮ ಅಭಿಪ್ರಾಯ?’ ಎಂದಾಗ-
ಆಲಿಯಾ ಭಟ್ಟ್ ಉತ್ತರಿಸಿದರು-
“ನನ್ನ ನೆಚ್ಚಿನ ರಣವೀರ್ ಸಿಂಗ್ ಬಗ್ಗೆ ನಾನು ನಕಾರಾತ್ಮಕವಾಗಿ ಏನನ್ನೂ ಕೇಳಲು ಸಾಧ್ಯವಿಲ್ಲ………”
ತನ್ನ ಮಾತನ್ನು ಮುಂದುವರಿಸುತ್ತಾ ಆಲಿಯಾ ಹೇಳುತ್ತಾರೆ- ”ನಾನು ಈ ಪ್ರಶ್ನೆಯನ್ನು ಕೇಳಲು ಸಹ ಸಾಧ್ಯವಿಲ್ಲ. ರಣವೀರ್ ನಮಗೆಲ್ಲರಿಗೂ ಸಾಕಷ್ಟು ಕೊಟ್ಟಿದ್ದಾರೆ ಮತ್ತು ಅದಕ್ಕೆ ಪ್ರತಿಯಾಗಿ ನಾವು ಅವರಿಗೆ ಪ್ರೀತಿಯನ್ನು ಮಾತ್ರ ನೀಡಬಲ್ಲೆವು.”
ರಣವೀರ್ ಸಿಂಗ್ ಮ್ಯಾಗಜೀನ್‌ಗಾಗಿ ನಗ್ನ ಫೋಟೋ ಶೂಟ್ ಮಾಡಿಸಿಕೊಂಡಿದ್ದ ಆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿವೆ. ವಿವಾದದ ನಡುವೆ ರಣವೀರ್ ಸಿಂಗ್‌ಗೆ ಹಲವು ತಾರೆಯರು ಬೆಂಬಲ ನೀಡುತ್ತಿದ್ದಾರೆ. ಶೀಘ್ರದಲ್ಲೇ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ಟ್ ಫಿಲ್ಮ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ . ಕರಣ್ ಜೋಹರ್ ಅವರ ಈ ಫಿಲ್ಮ್ ನ ಹೆಸರು ’ರಾಕಿ ಔರ್ ರಾಣಿ ಕೀ ಪ್ರೇಮ್ ಕಥಾ’.

ಗೈರು ಹಾಜರಿಗೆ ಸನ್ನಿ ಡಿಯೋಲ್ ಸ್ಪಷ್ಟನೆ: “ನಾನು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ”

ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡದಿರುವುದಕ್ಕೆ ಬಾಲಿವುಡ್ ನ ಖ್ಯಾತ ತಾರೆ ಸನ್ನಿ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ. ಸನ್ನಿ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ದೇಶದಲ್ಲಿ ಇರಲಿಲ್ಲ. ಈ ಕಾರಣದಿಂದಾಗಿ, ಅವರು ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಪಂಜಾಬ್‌ನ ಗುರುದಾಸ್‌ಪುರ ಸಂಸದ ಸನ್ನಿ ಡಿಯೋಲ್ ಮತದಾನ ಮಾಡದೇ ಟೀಕೆಗೆ ಗುರಿಯಾಗಿದ್ದರು. ಅವರ ಸಂಸದೀಯ ಕ್ಷೇತ್ರದಲ್ಲಿ ಅವರು ಲಭ್ಯವಿಲ್ಲದಿರುವ ಬಗ್ಗೆ ಆಗಾಗ್ಗೆ ಚರ್ಚಿಸಲಾಗುತ್ತದೆ.


ಸನ್ನಿ ಡಿಯೋಲ್ ಗುರುದಾಸ್‌ಪುರದ ಬಿಜೆಪಿ ಸಂಸದ:.
ಸನ್ನಿ ಡಿಯೋಲ್ ಅವರ ವಕ್ತಾರರು ಹೇಳಿದಂತೆ ಕೆಲವು ಸಮಯದ ಹಿಂದೆ ಫಿಲ್ಮ್ ನ ಶೂಟಿಂಗ್ ವೇಳೆ ಅವರು ಗಾಯಗೊಂಡಿದ್ದರು. ಅವರು ಮೊದಲು ಮುಂಬೈನಲ್ಲಿ ಚಿಕಿತ್ಸೆ ಪಡೆದರು. ಆದರೆ, ನಂತರ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಬೇಕಾಯಿತು. ಕಳೆದ ೨ ವಾರಗಳಿಂದ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟರಲ್ಲಿ ರಾಷ್ಟ್ರಪತಿ ಚುನಾವಣೆ ಬಂತು. ಅವರು ದೇಶದಲ್ಲಿ ಇಲ್ಲದ ಕಾರಣ, ಭಾಗವಹಿಸಲು ಸಾಧ್ಯವಾಗಲಿಲ್ಲ. ಚೇತರಿಸಿಕೊಂಡ ಕೂಡಲೇ ದೇಶಕ್ಕೆ ಮರಳಲಿದ್ದಾರೆ. ಸನ್ನಿ ಅವರ ೪ ಸಿನಿಮಾಗಳು ಬಾಪ್, ಸೂರ್ಯ, ಗದರ್ ೨ ಮತ್ತು ಅಪ್ನೆ ೨ ಸಿದ್ಧವಾಗುತ್ತಿವೆ.