ಅಭಿಮಾನಿಗಳ ಪ್ರೀತಿಗಿಂತ ರಾಜಕೀಯ ದೊಡ್ಡದಲ್ಲ: ಪುನೀತ್

ತುಮಕೂರು, ಮಾ. ೨೩- ಎಲ್ಲರೂ ಕನ್ನಡ ಚಿಲನತ್ರಗಳಿಗೆ ಆದ್ಯತೆ ನೀಡಿ ಕನ್ನಡಚಿತ್ರ, ಕನ್ನಡ ಚಿತ್ರೋದ್ಯಮವನ್ನು ಬೆಳೆಸಲು ಸಹಕಾರಿಯಾಗಬೇಕು ಎಂದು ನಟ ಪುನೀತ್‌ರಾಜ್‌ಕುಮಾರ್ ಮನವಿ ಮಾಡಿದರು
ನಗರದ ಎಸ್‌ಐಟಿ ಕಾಲೇಜಿನ ಆವರಣಕ್ಕೆ ಯುವರತ್ನ ಚಲನಚಿತ್ರದ ಪ್ರಮೋಶನ್‌ಗೆ ಆಗಮಿಸಿದ ಪುನೀತ್ ರಾಜಕುಮಾರ್ ಅವರು ನೆರೆದಿದ್ದ ಅಪಾರ ಅಭಿಮಾನಿಗಳು ಹಾಗೂ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಇದಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿತ್ರದ ಪ್ರಮೋಷನ್‌ಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಹೇಳಿದರು.
ಅಭಿಮಾನಿಗಳ ಪ್ರೀತಿಗಿಂತ ರಾಜಕೀಯ ದೊಡ್ಡದಲ್ಲ. ನಾವು ಎಂದಿಗೂ ರಾಜಕೀಯದ ಹಿಂದೆ ಹೋಗುವುದಿಲ್ಲ ಎಂದು ಅವರು ತಿಳಿಸಿದರು.
ನೂರಾರು ಅಭಿಮಾನಿಗಳು ಪುನೀತ್ ಅವರಿಗೆ ದೊಡ್ಡದಾದ ಸೇಬು ಹಣ್ಣಿನ ಹಾರ, ಪುಷ್ಪ ಸಿಂಚನ ಮಾಡಿ ಸಂತಸಪಟ್ಟರು.