ಅಭಿಮಾನಿಗಳಿಂದ ಸಿದ್ದುಗೆ ಟಗರು ಕೊಡುಗೆ

ಕೋಲಾರ,ಮೇ,೨೨:ಎರಡನೇ ಬಾರಿಗೆ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಅಭಿಮಾನಿಗಳು ಅದ್ದೂರಿ ಸಂಭ್ರಮಾಚರಣೆ ಆಚರಿಸಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜೆ.ಕೆ.ಜಯರಾಂ ನೇತೃತ್ವದಲ್ಲಿ ಒಂದು ಲಕ್ಷ ರೂ. ಮೌಲ್ಯದ ಟಗರನ್ನು ಸಿದ್ದರಾಮಣ್ಣ ಸೇನೆ ಅಭಿಮಾನಿಗಳು ಖರೀದಿಸಿ ನಗರದಲ್ಲಿ ಮೆರವಣಿಗೆ ನಡೆಸಿ ಅಧಿದೇವತೆ ಕೋಲಾರಮ್ಮ ದೇವಾಲಯ ಸೇರಿದಂತೆ ನಾನಾ ಕಡೆ ಪೂಜೆ ಮಾಡಿಸಿ ಸಿದ್ದರಾಮಯ್ಯರಿಗೆ ಕೊಡಲಿದ್ದಾರೆ.
ಭಾನುವಾರ ಬೆಳಗ್ಗೆ ಸಿಎಂ ಸಿದ್ದರಾಮಣ್ಞ ಅವರಿಗೆ ಟಗರನ್ನು ಹಸ್ತಾಂತರ ಮಾಡುವ ಮೂಲಕ ಶುಭ ಕೊರಲಾಗುವುದೆಂದು ಕುರುಬರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಂ ಮಾಹಿತಿ ನೀಡಿದರು.
ಸಿದ್ದರಾಮಣ್ಣ ಸೇನೆ ಅಭಿಮಾನಿಗಳಾದ ಮುನಿವೆಂಕಟಪ್ಪ, ಉಷಾ ವೆಂಕಟರವಣಪ್ಪ, ಅಡ್ಡಗಲ್ ಮುನಿಯಪ್ಪ, ಟ್ರಜರಿ ಸೀನಪ್ಪ, ಗಜಲಕ್ಷ್ಮಿ ಗಜೇಂದ್ರ, ಸಿವಿಕೆ ಗಂಗಾಧರ್, ಮೇಸ್ತ್ರಿ ಸಂಪತ್, ಬೀರೇಶ್ ಗೌಡ, ವಿಭೂತಿ ಪುರ ವೆಂಕಟ ಸ್ವಾಮಿ, ಮುನಿರಾಜು, ರಮೇಶ್, ದೊಣ್ಣೆಸೀನ ಇದ್ದರು.