ಅಭಿಮಾನಿಗಳಿಂದ ಗುಳೆದ ಲಕ್ಕಮ್ಮದೇವಿಗೆ ಹರಕೆ ಸೇವೆ.


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.17: ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲೆಂದು ಹರಕೆ ಹೊತ್ತಿದ್ದ ತಾಲೂಕಿನ ಅಲಮರಸೀಕೆರೆ ಗ್ರಾಮದ ಇಬ್ಬರೂ ಅಭಿಮಾನಿಗಳು ತಮ್ಮ ಗ್ರಾಮದಿಂದ ಮಂಗಳವಾರ ಹುಲಿಕಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಗುಳೆದ ಲಕ್ಕಮ್ಮ ದೇವಸ್ಥಾನದವರೆಗೆ ದೀಡು ನಮಸ್ಕಾರ ಹಾಕಿ ಹರಕೆ ತಿರಿಸಿದರು.
ಅಲಮರಸೀಕರೆ ಗ್ರಾಮದ ಕೊಳಚಿ ರೇವಪ್ಪ ಹಾಗೂ ಭೋವಿ ದುರುಗಪ್ಪ ಎಂಬುವರು 10 ಕಿ.ಮೀ ದೂರದ ಅರಣ್ಯ ಪ್ರದೇಶದಲ್ಲಿರುವ ಪ್ರಸಿದ್ದ ಗುಳೆದ ಲಕ್ಕಮ್ಮ ದೇವಸ್ಥಾನಕ್ಕೆ ಉರುಳು ಸೇವೆ ಮೂಲಕ ದೀಡು ನಮಸ್ಕಾರ ಹಾಕಿ ಹರಕೆ ತಿರಿಸಿದರು.
ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗೆ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಗೆಲುವು ಸಾಧಿಸಲೆಂದು ದೇವಿಗೆ ಪ್ರಾರ್ಥಿಸಿದರು.
ಗುಳೆದ ಲಕ್ಕಮ್ಮ ದೇವಸ್ಥಾನಕ್ಕೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಆಗಮಿಸಿ ದೀಡು ನಮಸ್ಕಾರ ಹಾಕಿದವರೊಂದಿಗೆ ಸೇರಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭಾ ಸದಸ್ಯರಾದ ಲಾಟಿ ದಾದಪೀರ್, ತಾ.ಪಂ ಮಾಜಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ಕೋಟೆಪ್ಪ, ಹನುಮಂತಪ್ಪ, ಮತ್ತೂರು ಬಸವರಾಜ, ಶಿವರಾಜ ಸೇರಿದಂತೆ ಇತರರು ಇದ್ದರು.
17ಎಚ್‍ಆರ್‍ಪಿ1: ಹರಪನಹಳ್ಳಿ: ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಕ್ಕೆ ಅಲಮರಸೀಕೆರೆ ಗ್ರಾಮದ ಅಭಿಮಾನಿಗಳು ದೀಡು ನಮಸ್ಕಾರ ಹಾಕಿ ಹರಕೆ ತಿರಿಸಿದರು.