ಅಭಿಮಾನಿಗಳಿಂದ ಕ್ರಾಂತಿ ಸಿನಿಮಾದ ಪ್ರಮೋಷನ್

ನಂಜನಗೂಡು: ಜು.18:- ದರ್ಶನ್ ಅವರ ಸಿನಿಮಾಗಳನ್ನು ಮಾಧ್ಯಮಗಳು ಪ್ರಚಾರ ಮಾಡಿರುವುದನ್ನು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ದರ್ಶನ್ ತೂಗುದೀಪ್ ಅಭಿಮಾನಿಗಳ ಸಂಘ ಡಿ ಬಾಸ್ ಕಂಪನಿ ಹಾಗೂ ನಂಜನಗೂಡಿನ ದರ್ಶನ್ ಅಭಿಮಾನಿಗಳ ವತಿಯಿಂದ ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ನೂರಾರು ಅಭಿಮಾನಿಗಳು ಸೇರಿ ಮಾಡಿದರು.
ನಂಜನಗೂಡಿನ ಕ್ಷೇತ್ರಧಿಪತಿಯಾದ ನಂಜುಂಡೇಶ್ವರನ ಸನ್ನಿಧಿಯಲ್ಲಿ ನೂರಾರು ಅಭಿಮಾನಿಗಳು ಕ್ರಾಂತಿ ಸಿನಿಮಾದ ಬೃಹತ್ ಗಾತ್ರದ ಭಾವಚಿತ್ರವನ್ನು. ಹತ್ತಾರು ಬೈಕ್ ಗಳು ಮತ್ತು ನೂರಾರು ಅಭಿಮಾನಿಗಳು ಬೃಹತ್ ಜಾತ ನಡೆಸಿದರು ನಂಜನಗೂಡಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು ಮೆರವಣಿಗೆಗೆ ಬಿಗಿ ಪೆÇಲೀಸ್ ಬಂದೋಬಸ್ ನೀಡಲಾಗಿತ್ತು.