ಅಭಿಮಾನಿಗಳಿಂದ ಅಪ್ಪು ಅಜರಾಮರ- ಜಿ.ಲೋಕರೆಡ್ಡಿ

ಸಿರವಾರ.ಮಾ೧೭- ಒಬ್ಬ ವ್ಯಕ್ತಿಯನ್ನು ಇದ್ದಾಗ ಹೇಗೆ ಅಭಿಮಾನಿಸಿ ಆರಾಧಿಸುತ್ತಿದ್ದರೋ, ಹೋದ ನಂತರವೂ ಅದಕ್ಕಿಂತಲೂ ಹೆಚ್ಚು ಆರಾದಿಸುತ್ತಾರೆ ಎಂದರು.
ಕರ್ನಾಟಕ ರತ್ನ, ಪವರಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಅಜರಾಮರವಾಗಿದ್ದಾರೆ ಎಂದು ವಾಣಿಜ್ಯೋದ್ಯಮಿ ಹಾಗೂ ಜೆಡಿಎಸ್ ಹಿರಿಯ ಮುಖಂಡ ಜಿ.ಲೋಕರೇಡ್ಡಿ ಹೇಳಿದರು. ಪಟ್ಟಣದ ಮುಖ್ಯರಸ್ತೆಯ ಹತ್ತಿರ ವಾರ್ಡ್ ನಂ ೧೦ ತಾಯಮ್ಮ ಕಟ್ಟೆಯ ಹತ್ತಿರದ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಅಭಿಮಾನಿ ಹನುಮಂತ ಹಾಗೂ ಯುವಕರು ಸೇರಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ೪೯ ನೇ ಹುಟ್ಟುಹಬ್ಬದ ಆಚರಣೆ ಮಾಡಲಾಯಿತು.
ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮ ಜೀವಿತ ಅವಧಿಯಲ್ಲಿ ಮಾಡಿದ ಪುಣ್ಯದ ಕಾರ್ಯ, ಧಾನ, ಧರ್ಮ, ಇತರರಿಗೆ ಮಾಡಿದ ಸಹಾಯ ನಾವು ಹೋದ ನಂತರವೂ ಸಹ ಜನರ ಮನಸ್ಸಿನಲ್ಲಿ ಹಾಗೆ ಉಳಿಯುತ್ತೆವೆ. ಅಂತಹ ಅನೇಕ ಕಾರ್ಯಗಳು ಪುನೀತ್ ರಾಜಕುಮಾರ್ ಮಾಡಿದರು. ಅವರು ಸರಳತೆ ಗುಣಗಳನ್ನು ಎಲ್ಲಾರೂ ಅಳವಡಿಸಿಕೊಳಬೇಕು.
ಅವರು ಇಲ್ಲದೆ ಎರಡನೇ ಹುಟ್ಟುಹಬ್ಬ ಆಚರಣೆ ಇದಾಗಿದೆ. ಅಭಿಮಾನಿಗಳಿಂದ ಕನ್ನಡಿಗರಿಂದ ಅಪ್ಪು ಅಜರಾಮರವಾಗಿದ್ದಾರೆ ಎಂದರು. ಪತ್ರಕರ್ತ ಸುರೇಶ ಹೀರಾ ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷ ನಾಗರಾಜಗೌಡ ಡಿಎನ್, ವೈ.ಗುಂಡಯ್ಯಸ್ವಾಮಿ, ಗ್ಯಾನಪ್ಪ, ರಂಗನಾಥಭೋವಿ,ರಾಮಾಚಾರಿ, ಚಂದ್ರಶೇಖರ ಯಲಗೇರಿ, ಶರಣಬಸವ ಬಡಿಗೇರಿ, ಷರೀಪ್ ಮರಾಟ, ಶಿವು, ಹನುಮಂತ, ಆಂಜನೆಯ್ಯ ಸೇರಿದಂತೆ ಇನ್ನಿತರರು ಇದ್ದರು.