
ಶಹಾಪುರ :ಮಾ.12:ಮತಕ್ಷೇತ್ರದ ದರ್ಶನಾಪುರ ಅಭಿಮಾನಿ ಬಳಗದಿಂದ ಹಮ್ಮಿಕೊಂಡ, ಮಾಜಿ ಮಂತ್ರಿ ಶಾಸಕರಾದ ಶರಣಬ್ಸಪ್ಪಗೌಡ ದರ್ಶನಾಪುರವರ 62ನೇಯ ಜನ್ಮಷಷ್ಠಿಬ್ದಿ ಸಮಾರಂಭದವನ್ನು, ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಭಾರತಿ ದರ್ಶನಾಪುರ ದಂಪತಿಗಳಿಗೆ ಸಗರ ನಾಡಿನ ಅನೇಕ ಮಠಾಧೀಶರು. ದರ್ಶನಾಪುರ ಅಭಿಮಾನಿಗಳು ಅಬಿಮಾನದ ಮಾಹಾಪುರವನ್ನೆ ಹರಿಸಿದರು ಪುಷ್ಪಗಳ ಮಳೆಗೆರದ ಅಭಿಮಾನಿಗಳು ದರ್ಶನಾಪುರವರ ಕ್ರೀಯಾಶೀಲತೆಯನ್ನು ಕೊಂಡಾಡಿದರು. ಈ ಸಮಯದಲ್ಲಿ ಮಾತನಾಡಿದ ಶಾಸಕ ದರ್ಶನಾಪುರವರು ಅನಿವಾರ್ಯತೆ, ಅನಿರಿಕ್ಷಿತವಾಗಿ ರಾಜಕೀಯಕ್ಕೆ ಕರೆ ತಂದು, ಟಿಕೆಟ ನೀಡಿ ಗೆಲ್ಲಿಸಿ ಶಹಾಪುರ ಮಾಹಾಜನತೆ ಮಾಹತ್ಕಾರ್ಯಗಳು ಮರೆಯಲಾಗದ ಸಂಗತಿಗಳಾಗಿವೆ. ತಂದೆ ಬಾಪುಗೌಡರ ಅಮೋಘ ಸಾಧನೆಗಳು ನನಗೆ ದಾರಿದೀಪವಾಗಿವೆ. ಕ್ಷೇತ್ರದಿಂದ ಆಯ್ಕೆಗೊಂಡು, ರಾಜ್ಯ ಸಚಿವ ಸಂಪುಟದಲ್ಲಿ ಸಚಿವನಾಗಿ ಅನೇಕ ಸಾಮಾಜಿಕ ಸುಧಾರಣೆ ಕಾರ್ಯಗಳನ್ನು ಮಾಡಿದ್ದು, ನನಗೆ ತೃಪ್ತಿ ತಂದಿದೆ. ಅಲ್ಲದೆ ಕ್ಷೇತ್ರದ ಅಭಿವೃದ್ದಿಗೆ ವಿರೋಧ ಪಕ್ಷದ ಆಡಳಿತವಿದ್ದರೂ, ಪರಸ್ಪರ ಸಹಕಾರಗಳಿಂದ ನನಗೆ ಕ್ಷೇತ್ರದ ಪ್ರಗತಿಗೆ ಅನುಧಾನ ಕೊರತೆ ಉಂಟಾಗದಂತೆ ಕರ್ತವ್ಯ ನಿರ್ವಹಿಸಿದ್ದೇನೆ. ಕ್ಷೇತ್ರದ ಪ್ರಗತಿ ನನ್ನ ಉಸಿರನ್ನಾಗಿಸಿಕೊಂಡು, ಪ್ರತಿ ಹಳ್ಳಿಯಲ್ಲೀ ರಸ್ತೆ ಚರಂಡಿ ಕುಡಿಯುವ ನೀರು ವಿದ್ಯುತ್ ಸಂಪರ್ಕ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳಿಗೆ ಸ್ಪಂಧಿಸಿಕೊಂಡು ಜನರ ಸಹಕಾರ ಪಡೆದ ಸಂತೃಪ್ತಿಯಾಗಿದೆ ಎಂದು ದರ್ಶನಾಪುರವರು ತಮ್ಮ ಮನದಾಳದ ಮಾತುಗಳನ್ನಾಡಿದರು.