ಅಭಿನಯ, ಡಾನ್ಸ್ ಫಾರ್ ಹೋಲಿಸ್ಟಿಕ್ ಹೆಲ್ತ್ ಸೆಮಿನಾರ್

ದಾವಣಗೆರೆ.ಜು.೨೭: ಭರತಾಂಜಲಿ ಆಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ವಿದ್ವತ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗಾಗಿ ಈಚೆಗೆ ಅಭಿನಯ ಹಾಗೂ ಡಾನ್ಸ್ ಫಾರ್ ಹೋಲಿಸ್ಟಿಕ್ ಹೆಲ್ತ್ ಎಂಬ ವಿಷಯದ ಕುರಿತು ಮೂರು ದಿನಗಳ ಕಾರ್ಯಗಾರ ಮತ್ತು ಸೆಮಿನಾರ್‌ನ್ನು ಆಯೋಜಿಸಲಾಗಿತ್ತು.ಭರತಾಂಜಲಿಯ ನಿರ್ದೇಶಕರಾದ ವಿದುಷಿ ಡಾ.ಬಿ. ಮಂಗಳಾ ಶೇಖರ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ವಿಶ್ವವಿದ್ಯಾಲಯದ ದೃಶ್ಯ ಕಲೆ ಮಾಧ್ಯಮ ಕಾಲೇಜಿನ ಪ್ರೊ. ವಿದುಷಿ ಡಾ. ಶೀಲಾ ಹೆಚ್.ಕೆ. ಶ್ರೀಧರ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಸಂಸ್ಕಾರ ಭಾರತಿ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಕಲಾವಿದ ಎ. ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಯಾಗಿ ವಕೀಲರು ಹಾಗೂ ನೃತ್ಯ ಕಲಾವಿದೆ ಅಲಕಾನಂದ ರಾಮದಾಸ್ ಮತ್ತಿತರರು ಪಾಲ್ಗೊಂಡಿದ್ದರು.