
ಕಲಬುರಗಿ:ಮೇ.6: ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಲಯದ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿನಿಯರನ್ನು ಆವ್ಹಾನಿಸಿ ಸತ್ಕರಿಸಲಾಯಿತು.
ಮೊದಲಿಗೆ ಕು.ಅಶ್ವಿನಿ ಪಾಟೀಲ- ಬಿ.ಕಾಂ ದ್ವಿತೀಯ ಸೆಮೆಸ್ಟರ್ ಇವರು ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ಉಮಾ ಮಿಣಜಿಗಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಈ ಕಾರ್ಯಕ್ರಮಕ್ಕೆ ಡಾ.ಶಾಂತಾ ಮಠ, ಡಾ. ನಾಗೇಂದ್ರ ಮಸೂತಿ ಹಾಗೂ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಉಷಾದೇವಿ ಪಾಟೀಲ ಆಗಮಿಸಿದ್ದರು.
ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಡಾ.ಶಾಂತಾ ಮಠ ಅವರು ಮಾತನಾಡುತ್ತ ನೀವು ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿದ್ದಿರಿ. ಮುಂದೆ ನೀವು ಓದಬೇಕಾದ್ರೆ ಸ್ವತಃ ವಿಚಾರಿಸಿರಿ. ನಿಮ್ಮ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಅದು ನಿಮ್ಮ ಕೈಯಲ್ಲಿ ಇದೆ ಎಂದರು. ಡಾ. ನಾಗೇಂದ್ರ ಮಸೂತಿ ಮತ್ತು ಶ್ರೀಮತಿ ಉಷಾದೇವಿ ಪಾಟೀಲ ಅವರು ಮತನಾಡಿದರು. ಕಲಬುರಗಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ 35 ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾಲೇಜಿನ ಪ್ರಾಧ್ಯಾಪಕರಾದ ಉಮಾ ಪಾಟೀಲ, ನಮ್ರತಾ, ಕನ್ಯಾಕುಮಾರಿ, ಅಂಬಿಕಾ, ಸಂಗಮೇಶ,ಅನುರಾಧ ಮತ್ತು ರೀತಾ ಅವರುಗಳು ಉಪಸ್ಥಿತರಿದ್ದರು.
ಕೊನೆಯಲ್ಲಿ ಶ್ರೀಮತಿ ಉಮಾ ಪಾಟೀಲರು ವಂದಿಸಿದರು.