ಅಭಿನಂದನ್‍ಗೆ ಪಿಹೆಚ್‍ಡಿ

ಧಾರವಾಡ, ಜ12: ಬೆಂಗಳೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ(ಸ್ವಾಯತ್ತ) ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಅಭಿನಂದನ್ ಎನ್ ಅವರು, “ಆನ್ ಇವ್ಯಾಲ್ಯುಯೇಷನ್ ಆಫ್ ಮೈಕ್ರೊ-ಫೈನಾನ್ಸ್ ಇನ್‍ಮೈಕ್ರೊ ಸ್ಮಾಲ್ ಎಂಟರ್‍ಪ್ರೈಸಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಧಾರವಾಡ ಡಿಸ್ಟ್ರಿಕ್ಟ್ ಇನ್ ಕರ್ನಾಟಕ” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಧಾರವಾಡ ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ವ್ಯವಹಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎ.ಎಂ.ಕಡಕೋಳ ಅವರ ಮಾರ್ಗದರ್ಶನದಲ್ಲಿ ಅಭಿನಂದನ್ ಎನ್. ಅವರು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಸಿದ್ಧಪಡಿಸಿದ್ದಾರೆ ಎಂದು ಧಾರವಾಡ ವಿಶ್ವವಿದ್ಯಾನಿಲಯದ ಕುಲಸಚಿವರು(ಮೌಲ್ಯಮಾಪನ) ತಿಳಿಸಿದ್ದಾರೆ.