ಅಭಿನಂದನಾ ಸಮಾರಂಭ

ರಾಣೇಬೆನ್ನೂರು, ಮಾ28: ಯಾವುದೇ ಒಂದು ಸ್ಥಾನಮಾನ ದೊರೆಯಬೇಕಾದರೆ ಜಾತ್ಯಾತೀತ ನಿಲುವಿನ ಸೇವೆ ಬಹು ಅಗತ್ಯ. ವಾಸ್ತವಿಕ ನಿಲುವಿನಲ್ಲಿ ವಸ್ತು ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮಾಡಿದವರಿಗೆ ಯಶಸ್ಸು ಎಂದಿದ್ದರೂ ಕಟ್ಟಿಟ್ಟ ಬುತ್ತಿ. ನೇರ, ನ್ಯಾಯ, ನಿಷ್ಟುರತೆಗೆ ಸದಾಕಾಲ ಗೌರವ ಇದ್ದೇ ಇರುತ್ತದೆ ಅಂತಹ ಹೋರಾಟ ಮಾಡಿದವರನ್ನು ಗುರುತಿಸುವ ಕೆಲಸ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಮಾಡಿದ್ದಾರೆ ಎಂದು, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿರ್ದೇಶಕ, ಹಾವೇರಿಯ ಸುರೇಶ್ ಮಲ್ಲಪ್ಪ ಹೊಸಮನಿ ಹೇಳಿದರು.
ಅವರು, ಗೌರಿಶಂಕರ್ ನಗರದ ನ್ಯಾಯವಾದಿ ವೀರನಗೌಡ ಅವರ ಗೃಹಸಭಾದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ನೂತನ ನಿರ್ದೇಶಕರ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಾವೇರಿ ಜಿಲ್ಲೆ ಸದಾ ಒಂದಿಲ್ಲಾ ಒಂದು ರಿತಿಯಲ್ಲಿ ಸಮಸ್ಯೆಗಳ ತವರೂರಾಗಿತ್ತು. ಅಂದು 2014ರಲ್ಲಿ ರೈತರ ಬೆಳೆ ವಿಮೆ ಪರಿಹಾರಕ್ಕಾಗಿ ನಿರಂತರ ಹೋರಾಟ ಮಾಡಿದ್ದರ ಫಲವಾಗಿ 2018 ರಲ್ಲಿ ಅದರಲ್ಲಿ ಯಶಸ್ಸು ಕಾಣಬೇಕಾಯಿತು. ಅಂತಹ ಅನೇಕ ಹೋರಾಟಗಳು ಸಂಘಟಿಸಿ, ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಳ್ಳಲಾಗಿದೆ. ಹೋರಾಟಗಾರರಿಗೆ ವೇದಿಕೆ ಕಾರ್ಯಕ್ರಮಗಳ ಅಗತ್ಯವಿಲ್ಲ ಎಂದಿಗೂ ತಾವು ವೇದಿಕೆಯನ್ನು ಬಯಸಿದವರಲ್ಲ. ತಮ್ಮದೇನಿದ್ದರು ನ್ಯಾಯ ಪರವಾದ ಹೋರಾಟ ಒಂದೇ ಎಂದರು.
ಪತ್ನಿ ಶ್ರೀಮತಿ ಅಂಬಿಕಾ ಸುರೇಶ್, ಮಹಿಳಾ ಮಂಡಳಿಯ ಶ್ರೀಮತಿ ಶಾರದಾ ವೀರನಗೌಡ್ರ, ಶ್ರೀಮತಿ ಸಿಂಧು ಬಣಕಾರ್, ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್. ಬುರಡಿಕಟ್ಟಿ, ನ್ಯಾಯವಾದಿ ಕೆ.ಬಿ.ಸೂರ್ಯಕಾಂತ್, ಕೊಟ್ರೇಶಪ್ಪ ಎಮ್ಮಿ, ವರ್ತಕ ಶಿವಣ್ಣ ಬಣಕಾರ್, ರಾಮಣ್ಣ ಅಂಗಡಿ, ಗಂಗಾಧರ ಬೆನಕನಕೊಂಡ, ಎ.ಬಿ.ವೀರನಗೌಡ್ರ, ಎಸ್.ಆರ್.ಪುಟ್ಟನಗೌಡ್ರ, ಅಶೋಕ್ ಕೊಪ್ಪದ್, ಪ್ರಭುಲಿಂಗಪ್ಪ ಹಲಗೇರಿ, ಬಸವರಾಜ ಸ್ವಾಮಿ, ಅಶೋಕ್, ಚಂದ್ರಶೇಖರ ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.