ಅಭಿನಂದನಾ ಸಮಾರಂಭ

ಆಲಮೇಲ :ಆ.26: ಪಟ್ಟಣದ ಗುರು ಸಂಸ್ಥಾನ ಹಿರೇಮಠದಲ್ಲಿ ಅಭಿನಂದನಾ ಸಮಾರಂಭ ಕಾರ್ಯಕ್ರಮ ಆಯೋಜಿಸಿದ್ದು, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲರು ಮತ್ತು ಶಾಸಕರು ಅಶೋಕ ಮನಗೂಳಿಯವರು ಶ್ರೀ ಮಠಕ್ಕೆ ಆಗಮಿಸಿದಾಗ ಶ್ರೀ ಮಠದ ಪೂಜ್ಯರಾದ ಚಂದ್ರಶೇಖರ ಶಿವಾಚಾರ್ಯರು ಬರಮಾಡಿಕೊಂಡರು, ಬಳಿಕ ಸಚಿವರು ಶ್ರೀ ಮಠದ ಕರ್ತೃರ ಗದ್ದುಗೆಗೆ ಪ್ರಾರ್ಥನೆ ಸಲ್ಲಿಸಿ ವೇದಿಕೆಗೆ ಜಿಲ್ಲೆಯ ಮಠಾಧೀಶರು ಬರಮಾಡಿಕೊಂಡರು. ಬಳಿಕ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಮಠಾಧೀಶರ ಪರ ಬಂಥನಾಳದ ಮ.ನಿ.ಪ್ರ . ವೃಷಭಲಿಂಗಸ್ವಾಮೀಜಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲರು ಶಾಸಕ ಅಶೋಕ ಮನಗೂಳಿಯವರಿಗೆ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ, ಗೌರವಿಸಿದರು. ಬಳಿಕ ಸಚಿವರು ಮಾತನಾಡಿ ನಾಡಿನ ಮಠಾಧೀಶರ ಕೊಡುಗೆ ಅತ್ಯಮೂಲ್ಯ , ಮಠಾದೀಶರು ದಾಸೋಹದ ಮೂಲಕ ಶಿಕ್ಷಣವನ್ನು ನೀಡಿದ್ದು, ನಮ್ಮೆಲ್ಲರಿಗೆ ಸಂಸ್ಕಾರ ನೀಡಿದ್ದು ಶ್ರೀ ಮಠಗಳ ಕೊಡುಗೆ ಅಪಾರವಾದದ್ದು, ಈ ನಾಡಿಗೆ , ಈ ಜಿಲ್ಲೆಗೆ ನಿಮ್ಮ ಆಶೀರ್ವಾದದಿಂದ ಸೇವೆ ಸಲ್ಲಿಸುವುದು ನನ್ನ ಭಾಗ್ಯ ಎಂದು ವಿಜಯಪುರ ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ರೂಪಿಸಿ ಹಲವಾರು ಕೆರೆಗಳನ್ನು ತುಂಬಿಸಿ, ನೀರಾವರಿ ಸೌ¯ಭ್ಯಗಳನ್ನು ರೈತರ ಜಮೀನಿನಲ್ಲಿ ನೀರು ಹರಿಸಲು ನನಗೆ ಮಹಾಸಂತ ಸಿದ್ದೇಶ್ವರ ಸ್ವಾಮೀಜಿಗಳ ಪ್ರೇರಣೆಯಿಂದ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ಕೊಂಡ್ಯೊಯಲು ಅನೇಕ ಮಾರ್ಗದರ್ಶನವನ್ನು ನೀಡಿದ್ದನ್ನು ಮಠಾಧೀಶರ ಸಮ್ಮುಖದಲ್ಲಿ ಸ್ಮರಿಸಿದರು. ಬಳಿಕ ಅನೇಕ ಮಠಾಧೀಶರು ಡಾ.ಎಂ.ಬಿ. ಪಾಟೀಲರು ಮಾಡಿದ ನೀರಾವರಿ, ಶಿಕ್ಷಣ, ವೈದ್ಯಕೀಯ , ಕೈಗಾರಿಕೆಗಳು ಹಲವಾರು ಕ್ಷೇತ್ರಗಳಲ್ಲಿ ಅವರ ಸಾಧನೆಯನ್ನು ಬಣ್ಣಿಸಿದರು. ಬಳಿಕ ಗ್ರಾಮದ ಯುವಕರು ಆಲಮೇಲ ಪಟ್ಟಣದ ಅಭಿವೃದ್ದಿ ಹಾಗೂ ಕೆರೆಯನ್ನು ಸೌಂದರ್ಯಗೊಳಿಸಲು ನೂತನ ತಾಲ್ಲೂಕಿಗೆ ವಿವಿಧ ಇಲಾಖೆಗಳು ಆದಷ್ಟು ಬೇಗ ಚಾಲನೆ ನೀಡಲು ಇಲ್ಲಿನ ಹಿರಿಯರಾದ ಕರ್ನಾಟಕ ರಾಜ್ಯದ ಮಾಜಿ ಆಗ್ರೋ ಕಾರ್ನ್ ನಿಗಮದ ಅಧ್ಯಕ್ಷ ಶಿವಕುಮಾರ ಗುಂದಗಿ ಅವರ ನೇತೃತ್ವದಲ್ಲಿ ಮನವಿ ನೀಡಿದರು. ಮನವಿಗೆ ಸ್ಪಂದಿಸಿ ಶೀಘ್ರದಲ್ಲೇ ಹಂತ- ಹಂತವಾಗಿ ಎಲ್ಲಾ ಇಲಾಖೆಗಳ ಕಾರ್ಯಾರಂಭಕ್ಕೆ ಚಾಲನೆ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಹಿರಿಯ ಪೂಜ್ಯರಾದ ವಿರೂಪಾಕ್ಷಯ್ಯ ಸ್ವಾಮಿಗಳು, ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು, ರೋಡಗಿ ಶ್ರೀಗಳು, ಮಮದಾಪುರ ಶ್ರೀಗಳು, ತಡವಲಗ ಶ್ರೀಗಳು, ಸಂಗನಗೌಡ ಬಮ್ಮನಹಳ್ಳಿ, ಸಿದ್ದು ಮುಗುಳಿ, ಶ್ರೀಶೈಲ ಮಠಪತಿ, ಶಿವಶರಣ ಗುಂದಗಿ ಶ್ರೀ ಮಠದ ಭಕ್ತ ವೃಂದ ಇದ್ದರು.