ಅಭಿನಂದನಾ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ


ಹುಬ್ಬಳ್ಳಿ,ಜೂ.26: ಶ್ರೀ ಹೇಮ-ವೇಮ ರಡ್ಡಿ ಜನಸಂಘ ಧಾರವಾಡ, ವತಿಯಿಂದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ 601 ನೇ ಜಯಂತ್ಯೋತ್ಸವ ಅಂಗವಾಗಿ ಸಮಾಜದ ನೂತನ ಶಾಸಕರಿಗೆ ಅಭಿನಂದನಾ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಭಾನುವಾರ ನಗರದ ಕುಸುಗಲ್ ರಸ್ತೆ ಶ್ರೀನಿವಾಸ್ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಇದೇ ವೇಳೆ 2022-23 ನೇ ಸಾಲಿನ ಎಸ್.ಎಸ್. ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಹರಿಹರ ಎರೆಹೊಸಹಳ್ಳಿ ರಡ್ಡಿ ಪೀಠದ ವೇಮನಾನಂದ ಸ್ವಾಮೀಜಿ, ಸಚಿವರಾದ ಎಚ್.ಕೆ.ಪಾಟೀಲ್, ರಾಮಲಿಂಗಾರಡ್ಡಿ, ಶಾಸಕರಾದ ಎನ್.ಎಚ್.ಕೋನರಡ್ಡಿ, ಗಾಲಿ ಜನಾರ್ದನ ರೆಡ್ಡಿ, ಚನ್ನರೆಡ್ಡಿ ಪಾಟೀಲ್, ಸಿ.ಎಸ್.ನಾಡಗೌಡರ, ಪ್ರಕಾಶ ಕೋಳಿವಾಡ, ಮೊದಲಾದವರು ಉಪಸ್ಥಿತರಿದ್ದರು.