
ಕಲಬುರಗಿ.ಏ 22: ನಮ್ಮತನ ಕಾಪಾಡಿಕೊಂಡಾಗ ಮಾತ್ರ ವಿಪ್ರ ಸಮಾಜ ಬೆಳೆಯಲು ಸಾಧ್ಯ ಎಂದು ಪತ್ರಕರ್ತ ಶಾಮಸುಂದರ ಕುಲಕರ್ಣಿ ಅಭಿಮತ ವ್ಯಕ್ತಪಡಿಸಿದರು.ನಗರದ ಸಿದ್ಧಿ ಮಾರುತಿ ಹನುಮಾನ ಮಂದಿರದಲ್ಲಿ ಅಖಿಲಭಾರತೀಯ ಬ್ರಾಹ್ಮಣ ಸಂಘದಿಂದ ಇಂದು ಆಚರಿಸಿದ ಪರಶುರಾಮ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ವಿಷ್ಣುವಿನ ದಶಾವತಾರದಲ್ಲಿ ಪರುಶರಾಮನ ಅವತಾರ ಕೂಡ ಒಂದು. ಭೂಮಿ ಮೇಲೆ ಸುಧೀರ್ಘಕಾಲ ಇದ್ದು ಧರ್ಮವನ್ನು ರಕ್ಷಿಸುವ ಕಾರ್ಯ ಪರುಶರಾಮ ದೇವರು ಮಾಡಿದ್ದಾರೆ ಎಂದರು.ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂರಕರ್ ಪ್ರಾಸ್ತಾವಿಕ ಮಾತನಾಡಿ, ವಿಪ್ರ ಸಮಾಜ ಒಂದುಗೂಡಿಸುವ ಕಾರ್ಯ ನಮ್ಮ ಸಂಘ ನಿರಂತರವಾಗಿ ಮಾಡುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ನಮ್ಮ ಹಕ್ಕು ಪಡೆದುಕೊಳ್ಳಲು ಹೋರಾಡಬೇಕಿದೆ. ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಬ್ರಾಹ್ಮಣ ಸಮಾಜದ ಸ್ಥಿತಿ ಇಂದು ಹೀನಾಯವಾಗಿದೆ. ತಾರತಮ್ಯ ಬದಿಗೊತ್ತಿ ಎಲ್ಲರೂ ಸೇರಿ ವಿಪ್ರ ಸಮಾಜ ಸಂಘಟಿಸೋಣ ಎಂದರು. ಸಿದ್ಧಿ ಮಾರುತಿ ದೇವಸ್ಥಾನದ ಅರ್ಚಕ ನಾರಾಯಣಾಚಾರ್ಯ ಕಮಲಾಪುರ ಅಧ್ಯಕ್ಷತೆ ವಹಿಸಿದ್ದರು. ಸುರೆಖಾ ದೊಟಿಹಾಳ ಪ್ರಾರ್ಥನೆ ಗೀತೆಯನ್ನು ಹೇಳಿದರು.ವೆಂಕಟೇಶ ಕುಲಕರ್ಣಿ ಕಾರ್ಯಕ್ರಮನಿರೂಪಿಸಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಎಎಂಎಂಬಿಎಸ್ ದಕ್ಷಿಣ ಅಧ್ಯಕ್ಷ ವಿನಾಯಕ ಕುಲಕರ್ಣಿ,ಪ್ರಲ್ಹಾದ ಪೂಜಾರಿ, ಶಶಾಂಕ ಪೂಜಾರಿ,ಪಾಂಡುರಂಗ ಜೊಶಿ ,ಲಕ್ಷಣ ಕುಲಕರ್ಣಿ ಅನುಪ ಆಳಂದಕರ, ಧನೇಶ ಮಾಲಗತ್ತಿ ,ಪ್ರವೀಣ ಆಲಗೂಡಕರ, ಮುರಳಿಧರ ಕರಲಗಿಕರ, ಗುರುರಾಜ್ ಕುಲಕರ್ಣಿ, ಸುನಿಲ ಕುಲಕರ್ಣಿ, ಮಧುರ ಮೈತ್ರಿ ಮಹಿಳಾ ಮಂಡಳ ಅಧ್ಯಕ್ಷೆ ಜ್ಯೋತಿ ಲಾತೂರಕರ್ ಸೇರಿದಂತೆ ಅನೇಕ ವಿಪ್ರಭಾಂಧವರು ಉಪಸ್ಥಿತರಿದ್ದರು.