ಅಬ್ಬಿಗೇರಿಯಲ್ಲಿ ಮನೆ ಬಾಗಿಲಿಗೆ ಪಡಿತರ: ಮೆಚ್ಚುಗೆ

ಗದಗ/ನರೇಗಲ್ಲ ಮೇ.28: ಕೊರೊನಾ ಸೋಂಕು ನಾಡಿನಾದ್ಯಂತ ಹರಡಿ ಅಪಾರ ಸಾವು ನೋವುಗಳಿಗೆ ಕಾರಣವಾಗಿದ್ದು, ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಬಡವರು ಮತ್ತು ಅಸಹಾಯಕರು ಅನ್ನದ ಕೊರತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಮನೆ ಮನೆಗೆ ಪಡಿತರ ವಿತರಣೆ ಕಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ, ತಮ್ಮ ಸ್ವಂತ ಹಣದಿಂದ ಬಡವರಿಗೆ ತರಕಾರಿ ಹಾಗೂ ಅಗತ್ಯ ಸಾಮಗ್ರಿಗಳ ವಿತರಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಸರ್ಕಾರಿ ನಿಯಮದಂತೆ ಮನೆಮನೆಗೆ ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿದ್ದಲ್ಲದೆ, ಸಂಘದ ಸದಸ್ಯರು ಹಾಗೂ ವಿಶೇಷವಾಗಿ ಅಧ್ಯಕ್ಷರು ತಮ್ಮ ಸ್ವತಃ ಹಣದಿಂದ ಬಡ ಕುಟುಂಬಗಳಿಗೆ ತರಕಾರಿಗಳನ್ನು ನೀಡುತ್ತಿದ್ದಾರೆ. ಕೆಒಎಫ್ ಸಂಘದ ಸದಸ್ಯರು ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿ ಮನೆ ಮನೆಗೆ ಅಡುಗೆ ಎಣ್ಣೆ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ.

ಕಳೆದ ಎರಡ್ಮೂರು ದಿನಗಳಿಂದ ಗ್ರಾಮದ ಕೆಲ ಬಡವರನ್ನು ಗುರುತಿಸಿ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದ ಹೆಸರಿನಲ್ಲಿರುವ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಹೊಂದಿರುವ ಕುಟುಂಬಗಳ ಸದಸ್ಯರು ಪಡಿತರವನ್ನು ಸರತಿ ಸಾಲಿನಲ್ಲಿ ನಿಂತು ತಗೆದುಕೊಂಡು ಹೋಗುವ ಸಂದರ್ಭದಲ್ಲಿ ಕೊರೋನಾ ಸೋಂಕು ಜನರಲ್ಲಿ ಹರಡಬಾರದು ಎಂಬ ಉದ್ದೇಶದಿಂದ ನ್ಯಾಯ ಬೆಲೆ ಅಂಗಡಿಯವರು ತಗೆದುಕೊಂಡ ನಿರ್ಧಾರ ಸಾರ್ವಜನಕರಿಗೆ ಮೆಚ್ಚಿಗೆಗೆ ಪಾತ್ರವಾಗಿದೆ.

ಜನರ ಕಷ್ಟಗಳಿಗೆ ಸ್ಪಂದನೆ ನೀಡಬೇಕಾದ ಸಹಕಾರಿ ಸಂಘಗಳು ಕಳೆದ ಹತ್ತಾರು ವರ್ಷಗಳಿಂದ ತಮ್ಮ ಲಾಭವನ್ನು ಮಾತ್ರ ನೋಡಿಕೊಂಡು ಹೋಗುತ್ತಿದ್ದವು ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಅಬ್ಬಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಇಂದಿನ ಅಧ್ಯಕ್ಷರಾದ ಎಂ.ಎಂ. ಚನ್ನಪ್ಪಗೌಡ್ರ ಅಧಿಕಾರ ಅವಧಿಯಲ್ಲಿ ಈ ಕೋವಿಡ್ ಸಂದರ್ಭದಲ್ಲಿ ಮನೆ ಮನೆಗೆ ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿದ್ದು, ರೈತರ ಕೃಷಿ ಚಟುವಟಿಕೆಗಾಗಿ ದೊರೆಯುವ ಸಾಲ ಸೌಲಭ್ಯವನ್ನು ಒದಗಿಸಲು ಶ್ರಮಿಸುತ್ತಿದ್ದಾರೆ.

ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ರೋಣ ಮತ ಕ್ಷೇತ್ರದಲ್ಲಿ ಎಲೆಮರಿ ಕಾಯಿ ಎನ್ನುವ ರೀತಿಯಲ್ಲಿ ಬಡವರಿಗೆ ಮತ್ತು ಕೊರೊನಾ ವಾರಿಯರ್ಸ್‍ಗಳಿಗೆ ನಿತ್ಯ ಅವರ ಕಷ್ಟಗಳಿಗೆ ಕೆಲ ಜನರು ಸಹಾಯ ಮಾಡುತ್ತಿದ್ದಾರೆ. ಅದರೊಂದಿಗೆ ನಮ್ಮ ಕ್ಷೇತ್ರದ ಜನಪ್ರತಿನಿಧಿಗಳು ಕೈಜೋಡಿಸುವುದು ಅಗತ್ಯವಾಗಿದೆ ಎಂದು ಕ್ಷೇತ್ರದ ಜನತೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.