ಅಬ್ಬರ ಆರ್ಭಕ್ಕೆ ಸಜ್ಜು

“ನಿರ್ದೇಶನದ ಪ್ರತಿ ಸಿನಿಮಾ‌ ಬಿಡುಗಡೆಯ ಸಮಯದಲ್ಲಿ ತಂದೆ ಬೆನ್ನೆಲುಬಾಗಿ ನಿಂತುಕೊಳ್ಳುತ್ತಿದ್ದರು. ಚಿತ್ರ ನೋಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.‌ ಇದು ಇನ್ನಷ್ಟು ಉತ್ಸಾಹ ನೀಡುತ್ತಿತ್ತು.‌ಈ ಬಾರಿ‌ ಚಿತ್ರ ನೋಡಿ ಅಭಿಪ್ರಾಯ ತಿಳಿಸಲು ಅವರು ನಮ್ಮೊಂದಿಗಿಲ್ಲ…”

ಹೀಗಂತ ಅರೆ ಕ್ಷಣ ಭಾವುಕರಾದರು ನಿರ್ದೇಶಕ ಕೆ.ರಾಮ್ ನಾರಾಯಣ್. ಅಬ್ಬರ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ   ನನಗೊಂದು ಟಿಕೆಟ್ ಕೊಡು ಅಂತ ಹೇಳಿದ್ದರು. ಕಳೆದ 6 ತಿಂಗಳ ಹಿಂದೆ ನಮ್ಮನ್ನು ಬಿಟ್ಟು ಹೋದರು. ತಂದೆ ಹೋದ  ಬೇಜಾರಿನಲ್ಲಿ ತಾಯಿಯೀ ಹೋದರು ಇದು ನೋವಿನ ಸಂಗತಿ ಎನ್ನುವ ಮೂಲಕ ಎಲ್ಲರ ಮನ ಕಲಕಿದರು ರಾಮ್ ನಾರಾಯಣ್.

ಇನ್ನು ಅಬ್ಬರ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಭಯ, ಕುತೂಹಲವೂ ಇದೆ. ಭರವಸೆಯಿಂದ ಕೆಲಸ ಮಾಡಿದ್ದರೂ‌ ಆತಂಕದಿಂದ‌ ಬಿಪಿ ಹೆಚ್ಚಾಗಿದೆ ಎಂದರು.

ನಟ ಪ್ರಜ್ವಲ್ ದೇವರಾಜ್, ಚಿತ್ರ ಬೇರೆ ಬೇರೆ ಶೇಡ್ ನಲ್ಲಿ ಬಂದಿದೆ. ಎಲ್ಲರಿಗೂ ಇಷ್ಟವಾಗಲಿದೆ ಎಂದರೆ ನಟಿ ನಿಮಿಕಾ‌ ರತ್ನಾಕರ್, ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಸಂಪೂರ್ಣ ಮನರಂಜನೆಯಿಂದ‌ ಕೂಡಿದ ಪೈಸಾ ವಸೂಲಿ ಚಿತ್ರ ಎಂದರು.

ನಿರ್ಮಾಪಕ‌‌ ಬಸವರಾಜ ಮಂಚಯ್ಯ ಬಿಡುಗಡೆ ಸಮಯದಲ್ಲಿ ಆತಂಕ‌ ಸಹಜ.ಅಬ್ಬರ ಆರ್ಭಟಿಸಲಿದೆ ಎನ್ನುವ ವಿಸ್ವಾಸದಲ್ಲಿದ್ದೇನೆ.‌ಈ ವಾರ ಚಿತ್ರ ಬಿಡುಗಡೆಯಾಗಲಿದೆ ಎಂದರು.

ಮತ್ತೊಬ್ಬ ನಟಿ‌ ಲೇಖಾ ಚಂದ್ರ, ವಿತರಕ ವಿಜಯ್, ಕಲಾವಿದರಾದ ಕೋಟೆ ಪ್ರಭಾಕರ್, ನಾಗರಾಜ್ ಅರಸು   ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.