ಅಬ್ಬರಿಸಿ ಬೊಬ್ಬೆರದ ಮಳೆರಾಯನ ಆರ್ಭಟ

ಚಿತ್ತಾಪುರ :ಆ.6:ತಾಲೂಕು ವಾಡಿ ಸಮಿಪದ ಕಮ್ಮರವಾಡಿ ಗ್ರಾಮದಲ್ಲಿ ಮಳೆ ಸುರಿದ ರಭಸಕ್ಕೆ ರಸ್ತೆಗಳೆಲ್ಲ ಕಿತ್ತು ಹೋಗಿ ಮನೆಗಳಿಗೆ ನುಗ್ಗಿದ ನೀರು ದವಸ ಧಾನ್ಯ ಬಟ್ಟೆ ಬರೆಗಳನ್ನೆಲ್ಲ ಆಹುತಿ ತೆಗೆದುಕೊಂಡಿದ್ದು ಬಡ ಕುಟುಂಬದವರೇ ವಾಸಿಸುತ್ತಿರುವ ಅದರಲ್ಲಿಯೂ ಅಲ್ಪಸಂಖ್ಯಾತರಗಿರುವ ಮೂರು ನಾಲ್ಕು ಕುಟುಂಗಳ ಗೋಳು ಕೇಳುವವರು ಯಾರು ಇಲ್ಲದಂತೆ ಆಗಿದೆ. ಈ ಗ್ರಾಮದಲ್ಲಿ ನೆಲೆಸಿರುವ ಅಂದ ಕುಟುಂಬ ಬಳೆ ಹಾಕಿ ಸಂಸಾರ ಸಾಗಿಸುವ ಇವರ ಮನೆಯಲ್ಲಿ ಪಾಶ್ರ್ವವಾಯು ಮಗ, ಅಂದ ತಂದೆ ಸಲೀಮನ ಗೋಳು ಯಾರು ಕೇಳುವವರು ಇಲ್ಲದಂತಾಗಿದೆ ಇಲ್ಲಿಯವರೆಗೂ ಯಾವುದೇ ತಾಲೂಕ ಅಧಿಕಾರಿಯಾಗಲ್ಲಿ ಗ್ರಾಮ ಸೇವಕನಾಗಲ್ಲಿ ಈ ಕುಟುಂಬದ ನೆರವಿಗೆ ನಿಂತಿಲ್ಲ, ತಾಲೂಕಾಡಳಿತ ಜಾಣಮೌನ ತಾಳಿದೆಯೇ ?
ಚಿತ್ತಾಪುರ ದಂಡಾಧಿಕಾರಿಗಳು : ನಮ್ಮ ಇಲಾಖೆ ವತಿಯಿಂದ ಸಂದರ್ಶನ ನೀಡಿದು ಅಕೌಂಟ ನಂಬರ ತೆಗೆದು ಕೊಳ್ಳಲಾಗಿದ್ದು ಸರ್ಕಾರಿ ವತಿಯಿಂದ ಸಿಗಬೇಕದ ಸವಲತನ್ನು ಕೊಡಲಾಗುತ್ತದೆ. ಇದು ದಂಡಾಅಧಿಕಾರಿಗಳ ಹೇಳಿಕೆ, ಆದರೆ ಇನ್ನೊಮ್ಮೆ ಗ್ರಾಮಸ್ಥರೂಂದಿಗೆ ವಿಚಾರಣೆ ಮಾಡಿದಾಗ ಇಲ್ಲಿವರೆಗೂ ಯಾವುದೇ ಗ್ರಾಮಲೇಖ ಪಾಲಕರು ಸಂದರ್ಶನ ನೀಡಿಲ್ಲ ಎಂದು ಗ್ರಾಮಸ್ಥರ ಹೇಳಿಕೆಯಾಗಿದೆ.