ಅಬ್ದುಲ್ ವಾಹಿದ್‌ಗೆ ರಾಷ್ಟ್ರ ಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿಃಸನ್ಮಾನ

ಮಾನ್ವಿ.ಅ.೩೧- ರವಿವಾರದಂದು ಕಲಬುರಗಿ ಕನ್ನಡ ಭವನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬೆಳಕು ಸಾಹಿತ್ಯ ಸಾಂಸ್ಕೃತಿಕ ಸಾಮಾಜಿಕ ಟ್ರಸ್ಟ್ ಮತ್ತು ಹೈದ್ರಬಾದ ಕರ್ನಾಟಕ ನಾಗರೀಕರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಸಂಭ್ರಮ ಸಮ್ಮೇಳನದಲ್ಲಿ ಗ್ರೇಡ್-೨ ತಹಸೀಲ್ದಾರ ಅಬ್ದುಲ್ ವಾಹಿದ್‌ರಿಗೆ ರಾಷ್ಟ್ರ ಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಸಮ್ಮೇಳನಾಧ್ಯಕ್ಷರಾದ ಸಿದ್ದಲಿಂಗಯ್ಯಸ್ವಾಮಿ ಕೊಡಗಿಮಠ, ಸಾಂಸ್ಕೃತಿಕ ಸಂಭ್ರಮದ ಅಧ್ಯಕ್ಷರಾದ ಪಾರ್ವತಿದೇವಿ ಹೊಂಬಾಳ, ರಾಜ್ಯ ಗ್ರಂಥಾಲಯ ನಿರ್ದೇಶಕ ಸತೀಶ ಹೊಸಮನಿ, ಮರಾಠ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಎಂ.ಜಿ.ಮೊಳೆ, ಬೆಳಕು ಸಾಹಿತ್ಯ ಸಾಂಸ್ಕೃತಿಕ ಸಾಮಾಜಿಕ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಹೈದ್ರಬಾದ ಕರ್ನಾಟಕ ನಾಗರೀಕರ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ, ಸಾಹಿತಿ ಬೀರಪ್ಪ ಶಂಭೊಜಿ ಸೇರಿದಂತೆ ಇನ್ನಿತರರಿದ್ದರು.
ಅಭಿನಂದನೆ ಃ ಅತ್ಯಂತ ದಕ್ಷ ಆಡಳಿತ ಮತ್ತು ಉತ್ತಮ ಕರ್ತವ್ಯ ನಿರ್ವಹಣೆ, ನಿಷ್ಠೆ, ಸಾಮಾಜಿಕ ಕಳಕಳಿ, ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಮಾನ್ವಿ ಕಂದಾಯ ಇಲಾಖೆಯ ಗ್ರೇಡ್-೨ ತಹಸೀಲ್ದಾರ ಅಬ್ದುಲ್ ವಾಹಿದ್‌ರಿಗೆ ರಾಷ್ಟ್ರ ಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿಯನ್ನು ನೀಡಿರುವುದು ತುಂಬಾ ಅಭಿನಂದನೀಯ ಎಂದು ತಹಸೀಲ್ದಾರ ಎಲ್.ಡಿ.ಚಂದ್ರಕಾಂತ ಸೇರಿದಂತೆ ಉಪತಹಸೀಲ್ದಾರರು, ಶಿರಸ್ತೆದಾರರು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಸಿಬ್ಬಂದಿ ವರ್ಗದವರು ಹೇಳಿದ್ದಾರೆ.