ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಧ್ವಜಾರೋಹಣ

ಕಲಬುರಗಿ:ಆ.15: ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಡಿಯಲ್ಲಿ ಬರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ಕಚೇರಿಯಲ್ಲಿ 77ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೆರಿಸಲಾಯಿತು.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪೂಜೆ ನೆರವೆರಿಸಿ, ಹಿರಿಯ ಬೋಧಕರಾದ ಶಿವಪುತ್ರಪ್ಪ ಗೊಬ್ಬೂರು ಧ್ವಜಾರೋಹಣ ನೆರವೇರಿಸಿದರು. ಬೋಧಕರಾದ ಡಾ.ರಾಜು ಕಂಬಳಿಮಠ 77ನೇ ಸ್ವಾತಂತ್ರೋತ್ಸವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಆಢಳಿತಾಧಿಕಾರಿ ಅನೀಲ್ ಬೇವಿನಮರದ, ತರಬೇತಿ ವ್ಯವಸ್ಥಾಪಕರಾದ ಪ್ರಶಾಂತ ಅಂಗಡಿ, ತರಬೇತಿ ಸಹಾಯಕರಾಧ ಅರ್ಚನಾ ಪಾಟೀಲ್, ಅಶ್ವೀನಿ ಪೂಜಾರಿ, ಸಿಬ್ಬಂಧಿಗಳಾದ ಶಾಂತಪ್ಪ, ಪ್ರಶಾಂತ ಜೆ, ಆರತಿ ಪಾಟೀಲ್, ಶಿವರಾಜ ಪಾಟೀಲ್, ಚಂದ್ರಕಲಾ ರವರು ಹಾಗೂ ವಿಕೇಂದ್ರಿಕೃತ ಸಂಯೋಜಕರಾದ ಸುಲೋಚನ ಅಕ್ಕ, ಉಪಸ್ಥಿತರಿದ್ದರು.