ಅಬ್ದುಲ್ ಕಲಾಂಗೆ ನಮನ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,17- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ವಿಜ್ಞಾನಿಯಾಗಿ ಕ್ಷಿಪಣಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಪಡೆಸಿದ್ದರಿಂದ ಅಣುಬಾಂಬು ಹಾಗೂ ಕ್ಷಿಪಣಿ ಜನಕ ಎಂದು ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಕರೆಯುತ್ತಾರೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಅವರು ಇಂದು ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಾಂ ಅವರ ನೆನಪು  ಹಾಗೂ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ದತಿದ್ದರು.
 2002 ರಿಂದ 2007 ರ ವರೆಗೆ ಭಾರತ ದೇಶದ ಹನ್ನೊಂದನೇ ರಾಷ್ಟ್ರಪತಿಯಾಗಿ ಕಲಾಂ ಅವರು  ಸೇವೆ ಸಲ್ಲಿಸಿ ಜನಸಾಮಾನ್ಯರಿಂದ ಮೆಚ್ಚುಗೆ ಪಡೆದಿದ್ದರು.ಲೇಖಕರಾಗಿ ಬರೆದ ಬೆಂಕಿಯ ರೆಕ್ಕೆಗಳು ಹಾಗೂ ಭಾರತ 2020 ಪುಸ್ತಕಗಳು ವಿಶ್ವ ಮನ್ನಣೆ ಪಡೆದಿವೆ ಎಂದರು. ಮಕ್ಕಳು ಹಾಗೂ ಬೋಧನೆಯನ್ನು ಸಾಕಷ್ಟು ಇಷ್ಟ ಪಡುತ್ತಿದ್ದರು.ಕೊನೆಯಲ್ಲಿ ತಾವು ಪಾಠ ಮಾಡುತ್ತಲೇ ಮರಣಹೊಂದಿದರು ಎಂದು ಹೇಳುವುದರ ಜೊತೆಗೆ ವಿದ್ಯಾರ್ಥಿಗಳು ಕಲಾಂ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಬಾಳಬೇಕೆಂದು ಹೇಳಿದರು.
ಹಿರಿಯ ಶಿಕ್ಷಕರಾದ ಬಸವರಾಜ ಪೂಜೆ ನೆರವೇರಿಸಿದರೆ ಮೋದಿನ್ ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿದ್ಯಾರ್ಥಿಗಳಾದ ಶಾಮಲಾ,ಸವಿತಾ  ಹಾಗೂ ವಿಜಯಲಕ್ಷ್ಮೀ ಭಾಷಣ ಮಾಡಿದರು.
ಶಿಕ್ಷಕರಾದ ಮುನಾವರ ಸುಲ್ತಾನ, ದಿಲ್ಷಾದ್ ಬೇಗಂ, ಚನ್ನಮ್ಮ, ದೈಹಿಕ ಶಿಕ್ಷಣ ಶಿಕ್ಷಕಿ ಸುಧಾ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.

One attachment • Scanned by Gmail