ಅಬುಲ್ ಕಲಾಂ ಆಜಾದ ಒಬ್ಬ ರಾಷ್ಟ್ರೀಯ ನಾಯಕ: ಡಾ.ರಜಾಕ್ ಉಸ್ತಾದ

ಆಲಮೇಲ್:ನ.14:ಅಬುಲ್ ಕಲಾಂ ಅವರು ಭವಿಷ್ಯ ಭವ್ಯ ಭಾರತದ ಶಿಕ್ಷಣಕ್ಕೆ ಬುನಾದಿ ಹಾಕಿದವರು,ಸದಾ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಇವತ್ತು ಮುಸ್ಲಿಂ ಸಮಾಜ ಶಿಕ್ಷಣದಿಂದ ವಂಚಿತವಾಗಿರುವುದು ಶೋಚನೀಯ ಎಂದು ಕಲಬುರಗಿ ವಿಶ್ವವಿದ್ಯಾಲಯದ ಪಾರಮರ್ರ ಅಫ್ ಅಕಾಡಮಿ ಕೌನ್ಸಿಲ್ ಮೇಂಬರ್ ಡಾ.ರಜಾಕ್ ಉಸ್ತಾದ ಹೇಳಿದ್ದರು.

ಪಟ್ಟಣದ ಅಂಜುಮನ್ ಶಾದಿಮಹಲ್‍ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಯೋಜಕರ ಅಶ್ಪಾಕ್ ಮುಲ್ಲಾ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೌಲಾನಾ ಅಬುಲ್ ಕಲಾಂ ಆಜಾದರವರ 132 ಜನ್ಮದಿನದ ಪ್ರಯುಕ್ತವಾಗಿ ಆದರ್ಶ ಶಿಕ್ಷಕರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಡೆದ ವಿಶೇಷ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಆಜಾದ ಅವರು ಶಿಕ್ಷಣ ಸಚಿವರಾಗಿ,ಬಹಭಾಷಾ ಪಂಡಿತರಾಗಿ,ಪತ್ರಕರ್ತರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ ಹಲವು ರಂಗಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ,ಜಿನ್ನಾ ಅವರ ಧರ್ಮದ ಆಧಾರ ಮೇಲೆ ದೇಶ ವಿಭಜನೆ ವಿರೋಧ ವ್ಯಕ್ತಪಡಿಸಿ ಮೊದಲ ಮುಸ್ಲಿಂ ನಾಯಕ ಇವರು ರಾಷ್ಟ್ರೀಯವಾದಿ ನಾಯಕರಾಗಿದ್ದರು. ಇವರ ಸಾಧನೆಯನ್ನು ಗುರುತಿಸಿ ಇವರಿಗೆ ಕೇಂದ್ರ ಸರಕಾರವು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ,ಇವರ ಜನ್ಮ ದಿನವನ್ನು ರಾಷ್ಡ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ.

ಜಗದೇವ ಮಲ್ಲಿಬೋಮ್ಮಯ್ಯ ಸ್ವಾಮಿಜಿಗಳು ವಿರಕ್ತಮಠ ಆಲಮೇಲ್, ರಾಯಚೂರ ಜಿಲ್ಲೆಯ ಗೋಲ್ಡನ್ ಹಟ್ಟಿಯ ಜಿಲ್ಲಾ ಪಂಚಾಯತ ಸದಸ್ಯರಾದ ಅಮಜದ್ ಹುಸೇನಖಾನ್,ಮಾಜಿ ಗ್ರಾ.ಪಂ ಅಧ್ಯಕ್ಷ ಅಯೂಬ್ ದೇವರಮನಿ,ಪ.ಪಂ.ಸದಸ್ಯ ಸಾಧೀಕ ಸುಂಬಡ, ದಲಿತ ಮುಖಂಡ ಹರೀಶ ಎಂಟಮಾನ್ ಮಾತನಾಡಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತರ ರಾಜ್ಯ ಸಂಯೋಜಕ ಅಶ್ಪಾಕ ಆರ್.ಮುಲ್ಲಾ,ಕಾಂಗ್ರೇಸ್ ಮುಖಂಡರಾದ ಶಫೀಕ ಜಮಾದಾರ,ನಜೀರ ಆಲಗೂರ,ಅಬ್ಬಾಸಲಿ ಕಮಲಾಪೂರ,ಅಶ್ಪಾಕ ಕಮಲಾಪೂರ,ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಆಶೋಕ ಕೊಳಾರಿ,ಪ.ಪಂ ಸದಸ್ಯರಾದ ಮಲ್ಲು ಅಚಲೇರಿ,ಯಲ್ಲಪ್ಪ ಬುರುಡ ಹಾಗೂ ಡಾ.ರೈಸ್ ಬೆಣ್ಣಿಶಿರೂರ್,ಸಂತೋಷ ಕುಂಬಾರ,ಲಾಲ್ ಫರಾಸ್, ಮಹಿಬೂಬ ಸಾಬ್ ಗೌರ,ಅಶ್ಪಾಕ ರುಕುಮುದ್ದಿನ್,ಆರೀಫ ಮುತವಲ್ಲಿ ಸೈಪನ್ ಫರಾಸ್, ಎಂ.ಡಿ.ಹುಸೇನ್‍ಪಟೇಲ್, ಫೈರೋಜ್ ಮಾನಗಾಂವಕರ, ಫಜಲ್ ದೇವರಮನಿ, ಸಮೀರ ಮುಲ್ಲಾ, ಬುಡ್ಡಾ ಯಡ್ರಾಮಿ, ರಫೀಕ ಮಳ್ಳಿ ಇದ್ದರು.

ಸನ್ಮಾನಿತಗೊಂಡ ಆದರ್ಶ ಶಿಕ್ಷಕರು

ಅಬ್ದುಲರಜಾಕ ಖಾನಗೌಡ, ಪಂಡಿತ ಅವಜಿ,ಪೈಗಂಬರ್ ಪಠಾಣ,ಬಿ.ಬಿ. ಮುಜಾವರ,ಬಿ.ಎಸ್.ನಿಡೋಣಿ,ಎಸ್.ಎಸ್.ಬಿರಾದಾರ, ಎಂ.ಎಸ್.ಬಿರಾದಾರ, ಹಾಜೀಸಾಬ್ ಮುಲ್ಲಾ, ಎಸ್.ವಿ.ಸಲಗೊಂಡ, ಶರಣು ಬ್ಯಾಡಗಿಹಾಳ

ಸನ್ಮಾನಿತಗೊಂಡ ಪ್ರತಿಭಾವಂತ ವಿದ್ಯಾರ್ಥಿಗಳು

ಕಾರ್ತಿಕ್ ಉಪ್ಪಿನ್,ಮುಜಮ್ಮಿಲ್ ಮುಲ್ಲಾ,ಪ್ರೀತಿ ನಾರಾಯಣಪೂರ,ಅಕ್ಷತಾ ಕುಂಬಾರ,ಅಕ್ಷತಾ ಬಿರಾದಾರ,ದಾವಲಮಲಿಕ ಶೇಖ,ಆದಿಲ್ ಹುಡೇಕಾರ ಇಬ್ರಾಹಿಮ್ ಮುಲ್ಲಾ