ಅಬಿನವಶ್ರೀಗಳಿಂದ ರವಿಬೋಸರಾಜು ಗೆ ಸನ್ಮಾನ.

ಸಿರವಾರ.ಜ.೪-ಕಾಂಗ್ರೇಸ್ ರಾಜ್ಯಯುವ ಮುಖಂಡ ರವಿಬೋಸರಾಜು ಅವರಿಗೆ ನವಲಕಲ್ ಬೃಹನ್ಮಠದ ಪೀಠಾದಿಪತಿ ಷ.ಬ್ರ.ಅಬಿನವ ಸೋಮನಾಥ ಶಿವಾಚಾರ್ಯ ಸನ್ಮಾನಿಸುವ ಮೂಲಕ ಆಶಿರ್ವಾದ ಮಾಡಿದರು. ತಾಲೂಕಿನ ನವಲಕಲ್ ಬೃಹನ್ಮಠಕ್ಕೆ ಇತ್ತೀಚೆಗೆ ಬೇಟಿ ನೀಡಿದ ರವಿ ಬೋಸರಾಜು ಅವರನ್ನು ಅಭಿನವ ಶ್ರೀಗಳು ಆತ್ಮಿಯವಾಗಿ ಸ್ವಾಗತಿಸಿದರು ನಂತರ ಶ್ರೀಶಾಂಭವಿ ದೇವಿಗೆ ದರ್ಶನ ಪಡೆದ ಅವರು ಮಾತನಾಡಿ ಜಿಲ್ಲೆಯಲ್ಲಿ ನವಲಕಲ್ ಮಠಕ್ಕೆ ಅಪಾರ ಪ್ರಮಾಣದ ಭಕ್ತರನ್ನು ಹೊಂದಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಯಾತ್ರ ನಿವಾಸ ನಿರ್ಮಾಣಕ್ಕೆ ನಮ್ಮ ತಂದೆ ಎನ್. ಎಸ್. ಬೋಸರಾಜು ಹಾಗೂ ಮಾಜಿ ಶಾಸಕ ಜಿ.ಹಂಪಯ್ಯನಾಯಕ ಅನುದಾನ ನೀಡಿದರು. ಶಾಂಭವಿ ದೇವಿ ದೇವಸ್ಥಾ ನಿರ್ಮಾಣ ಕಾರ್ಯ ಸಾಗಿದ್ದೂ ಆದಷ್ಟು ಬೇಗ ಪೂರ್ಣಗೊಳಲಿ ಎಂದರು. ಅಬಿನವ ಸೋಮನಾಥ ಶಿವಾಚಾರ್ಯರು, ಜಿ.ಪಂ. ಮಾಜಿ ಸದಸ್ಯ ಕೆ.ಅಸ್ಲಾಂಪಾಷ, ಚುಕ್ಕಿ ಶಿವಕುಮಾರ, ಮೌಲಸಾಬ್ ವರ್ಚಸ್, ದೇವಣ್ಣ, ನಾಗಪ್ಪ, ಶಿವಾನಂದ ಸೇರಿದಂತೆ ಇನ್ನಿತರರು ಇದ್ದರು..