
ಸೈದಾಪುರ:ಮಾ.11:ತಂದೆ-ತಾಯಿಯನ್ನು ಕಳೆದುಕೊಂಡ ಅಬಲೆ ಮಕ್ಕಳಿಗೆ ಆಶ್ರಯ ನೀಡುವ ಕಾರ್ಯ ಮಾಡುತ್ತಿರುವ ನೇರಡಗಂ ಶ್ರೀಗಳ ಸೇವೆ ಅಂತ್ಯಂತ ಶ್ರೇಷ್ಠವಾದದು ಎಂದು ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಪೀಠಾಧಿಪತಿ ಸಿದ್ಧಲಿಂಗ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮೀಪದ ನೇರಡಗಂ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರಿಂದ ತುಲಾಭಾರ ಸ್ವೀಕರಿಸಿ ಮಾತನಾಡಿದ ಅವರು ಭಾರತೀಯ ಹಿಂದೂ ಪರಂಪರೆಯಲ್ಲಿ ಪೂಜ್ಯನೀಯ ಸ್ಥಾನವನ್ನು ಹೊಂದಿರುವ ಗೋ ಮಾತೆಯ ರಕ್ಷಣೆಗಾಗಿ ಸುಕುಮಾರ ಗೋ ಶಾಲೆ, ಅನಾಥ ಮಕ್ಕಳಿಗಾಗಿ ಜಗದ್ಗುರು ಡಾ.ಸಂಗನಬಸವ ಅನಾಥಶ್ರಮ ನಿರ್ಮಾಣ, ಪ್ರತೀ ವರ್ಷ ಪುರಾಣ, ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ಸಾಧಕರಿಗೆ ಸನ್ಮಾನ ಹೀಗೆ ಹತ್ತಾರು ಕಾರ್ಯಕ್ರಮಗಳ ಮೂಲಕ ಭಕ್ತರ ಹೃದಯದಲ್ಲಿ ಶ್ರೀಗಳು ನೆಲೆಸಿದ್ದಾರೆ ಎಂದು ಗುಣಗಾನ ಮಾಡಿದರು.
ಈ ವೇಳೆ ನೇರಡಗಂ ಶ್ರೀಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು, ಅಭಿನವ ಚನ್ನಬಸವ ಮಹಾಸ್ವಾಮಿಗಳು ನಿಡಗುಂದಿಕೊಪ್ಪ, ಬಸಲಿಂಗ ಸ್ವಾಮಿಗಳು ಒಳಬಳ್ಳಾರಿ, ಶಿವಾ ಹಂಸಾರೂಢ ಸ್ವಾಮಿಗಳು ಹೈದ್ರಾಬಾದ್, ಶಿವಬಸವ ದೇವರು ದಾರವಾಡ, ಚಂದ್ರಶೇಖರ ದೇವರು ಗದಗ, ಯೋಗಾಗುರು ರುದ್ರಮುನಿ ದೇವರು ಸೇರಿದಂತೆ ಇತರರಿದ್ದರು.
ದಾನಿಗಳಿಗೆ ಸತ್ಕಾರ :
ನೇರಡಗಂ ಶ್ರೀಮಠದ ಅನಾಥಶ್ರಮ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳಾದ ಎಸ್.ಬಿ ಪಾಟೀಲ್ ಸೌರಾಷ್ಟ್ರಹಳ್ಳಿ, ಶರಣಿಕ ಕುಮಾರ ದೋಕಾ, ಬಸವರಾಜಪ್ಪಗೌಡ ಕ್ಯಾತನಾಳ, ಪ್ರಭುಲಿಂಗ ವಾರದ, ವಿಶ್ವನಾಥರೆಡ್ಡಿ ಪಾಟೀಲ್ ಚಿಗಾನೂರ, ನಿರಂಜನರೆಡ್ಡಿ ಶಟ್ಟಿಹಳ್ಳಿ, ಚಂದ್ರುಗೌಡ ಸೈದಾಪುರ, ಮಲ್ಲಣ್ಣಗೌಡ ಮುನಗಾಲ, ಶರಣಗೌಡ ಕ್ಯಾತನಾಳ, ಮಹಿಪಾಲರೆಡ್ಡಿ ದುಪ್ಪಲ್ಲಿ, ಕೆ.ಬಿ ಬನ್ನಯ್ಯ, ಕೆ.ಬಿ ರಾಘವೇಂದ್ರ, ಸಿದ್ದುಗೌಡ ಸಾವೂರ, ಸಿದ್ರಾಮಪ್ಪಗೌಡ ಗೊಂದಡಗಿ, ಮಲ್ಲಣ್ಣಗೌಡ ಸೈದಾಪುರ, ಚಂದ್ರುಗೌಡ ಹೆಗ್ಗಣಗೇರಾ, ಬಂದಯ್ಯ ಸ್ವಾಮಿ ಮಠದ ಕೂಡ್ಲೂರು, ತಿಮ್ಮಣ್ಣ ವಿಶ್ವಕರ್ಮ, ಹಣಮಂತ್ರಾಯ ಕೂಡ್ಲೂರು ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.