ಅಬಕಾರಿ ಪೊಲೀಸ್ ಭದ್ರತೆಯಲ್ಲಿ ಮದ್ಯ ಮಾರಾಟ ಪುನರಾರಂಭ

ಬ್ಯಾಡಗಿ,ಆ.10: ಮಹಿಳೆಯರ ಪ್ರತಿಭಟನೆಯಿಂದ ತಾಲೂಕಿನ ತಡಸ ಗ್ರಾಮದಲ್ಲಿ ಕಳದೆರಡು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಮದ್ಯದಂಗಡಿಯು ಅಬಕಾರಿ ಹಾಗೂ ಪೋಲಿಸ ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಬುಧವಾರ ವ್ಯಾಪಾರ ವಹಿವಾಟು ಪುನ:ರಾರಂಭಸಿತು.
ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ನಮ್ಮೂರಿಗೆ ಮದ್ಯ ಮಾರಾಟ ಅಂಗಡಿ ಬೇಡವೆಂದು ಗ್ರಾಮದ ಮಹಿಳೆಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು, ಆದರೆ ಅಬಕಾರಿ ಇಲಾಖೆಗಳ ಬುಧವಾರ ಮೇಲಾಧಿಕಾರಿಗಳ ನಿರ್ದೇಶನದಂತೆ ಪೋಲಿಸ ಬಿಗಿ ಭದ್ರತೆಯಲ್ಲಿ ಮದ್ಯದಂಗಡಿ ತೆರೆದು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಟ್ಟರು.
ಅಬಕಾರಿ ನಿರೀಕ್ಷಕ ಎಂ.ಎಚ್.ತಿರುಮಲೇಶ ಮಾತನಾಡಿ, ಗ್ರಾಮದಲ್ಲಿ ಕಳೆದೆರಡು ವರ್ಷಗಳಿಂದ ಮದ್ಯದಂಗಡಿ ವ್ಯಾಪಾರ ನಡೆಸಲಾಗುತ್ತಿದೆ, ಆದರೆ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು, ಇದೀಗ ಮೇಲಾಧಿಕಾರಿಗಳ ನಿರ್ದೇಶನದಂತೆ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು ಗ್ರಾಮಸ್ಥರಿಗೆ, ರಸ್ತೆ ಯಲ್ಲಿ ಓಡಾಡುವರಿಗೆ ತೊದರೆಯಾಗದಂತೆ ಎಚ್ಚರಿಕೆ ವಹಿಸಬೇಕು, ಯಾವುದೇ ಕಾರಣಕ್ಕೂ ಕುಡಿಯಲು ಮಾರಾಟ ಸ್ಥಳದಲ್ಲಿ ಅನುಮತಿ ನೀಡದೆ, ಪಾರ್ಸಲ್ ಒಯ್ಯಲು ಅವಕಾಶ ನೀಡಬೇಕು. ಅಂಗಡಿ ಸುತ್ತಲೂ ಸ್ವಚ್ಚತೆಗೆ ಆದ್ಯತೆ ನೀಡುವ ಮೂಲಕ ಇಲಾಖೆ ನಿಯಮ ಪಾಲಿಸಲು ಸೂಚಿಸಲಾಗಿದೆ ಎಂದರು.

ಕೋಟ್:
ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ:ಪ್ರತಿಭಟನೆ ಸಾರ್ವಜನಿಕರ ಹಕ್ಕು ಆದರೆ ಗ್ರಾಮದ ಮಹಿಳೆಯರು ಮದ್ಯದಂಗಡಿ ಬೇಡವೆಂದು ಹೋರಾಟ ನಡೆಸಿದ್ದರು, ಆದರೆ ಅಬಕಾರಿ ಜಿಲ್ಲಾ ನಿರೀಕ್ಷಕರು ಅಂಗಡಿ ತೆರೆಯಲು ಸೂಕ್ತ ರಕ್ಷಣೆ ಕೋರಿದ ಹಿನ್ನೆಲೆಯಲ್ಲಿ ಪೋಲಿಸ ಸಿಬ್ಬಂದಿಗಳೊಂದಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡು ವುದಿಲ್ಲ.. ಪಿಎಸ್‍ಐ ಮಂಜುನಾಥ ಕುಪ್ಪೇಲೂರು

ಬಾಕ್ಸ್:
ಭದ್ರತೆ ನಡುವೆ ಮದ್ಯ ಪಡೆದ ಜನರು: ಪೋಲಿಸರ ಸರ್ಪ ಕಾವಲ ನಡುವೆ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮದ್ಯದಂಗಡಿಗೆ ತೆರಳಿದ ಗ್ರಾಮಸ್ಥರು, ಎಂದಿನಂತೆ ಮದ್ಯ ಖರೀದಿಗೆ ಮುಂದಾದರು, ಹೀಗಾಗಿ ಬೆಳಿಗೆ 12 ಗಂಟೆಗೆ ಆರಂಭವಾದ ಅಂಗಡಿ ಎಂದಿನಂತೆ ತನ್ನ ವ್ಯಾಪಾರ ವಹಿವಾಟು ಮುಂದುವರೆಸಿತು..