ಅಬಕಾರಿ ಪೊಲೀಸರ ದಾಳಿಆಟೋ ಸಹಿತ 15 ಸಾವಿರ ಮೌಲ್ಯದ ಬೀರ್ ವಶ

ಹೊಸನಗರ.ಜೂ.೯; ಖಚಿತ ಮಾಹಿತಿ ಮೇರೆಗೆ ಮಂಗಳವಾರ ತಾಲೂಕಿನ ಮೇಲಿನಬೆಸಿಗೆ ಗ್ರಾಮದ ಗಜಾನನ ವೈನ್ಸ್ ಮುಂಭಾಗದಲ್ಲಿ ತೀರ್ಥಹಳ್ಳಿ ಉಪ ವಿಭಾಗದ ಅಬಕಾರಿ ಪೊಲೀಸರು ದಾಳಿ ನಡೆಸಿ ಮಾರಾಟಕ್ಕಾಗಿ ಆಟೋ ಒಂದರಲ್ಲಿ ಸಾಗಿಸುತ್ತಿದ್ದ ಸುಮಾರು ಹತ್ತು ಕೇಸ್ ಬೀರ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಈ ಸಂಬAಧ ರೂ 1.5 ಲಕ್ಷ ಮೌಲ್ಯದ ಆಟೋ ಜಪ್ತಿ ಮಾಡಿ, ರೂ 15 ಸಾವಿರ ಮೌಲ್ಯದ ಅವಧಿ ಮೀರಿದ ಬೀರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಕೃಷ್ಣ ಎಂ.ಬಿ. ಅವರನ್ನು ಬಂಧಿಸಿ, ನಂತರ ಕೋವಿಡ್-19 ರೋಗ ಹರಡುವ ಹಿನ್ನಲೆ ಸೂಕ್ತ ನಿರ್ದೇಶನ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಸೂಚನೆ ಮೇರೆಗೆ, ತೀರ್ಥಹಳ್ಳಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ್ ಕುಮಾರ್ ಎಲ್. ತಿಪ್ಪಣ್ಣನವರ್ ನೇತೃತ್ವದಲ್ಲಿ, ತೀರ್ಥಹಳ್ಳಿ ಅಬಕಾರಿ ನಿರೀಕ್ಷಕ ಪಿ.ಜೆ.ಜಾನ್ ಹಾಗೂ ಸಿಬ್ಬಂದಿಗಳಾದ ಕಾನ್‌ಸ್ಟೇಬಲ್ ಜಿ.ಎಸ್. ನಾಗರಾಜ್, ಪಾಂಡು ಅಂಬವ್ವಗೋಳ, ಶಕೀಲ್, ರಾಘವೇಂದ್ರ, ಮಲ್ಲಿಕ್, ಚಾಲಕ ಉಮೇಶ್ ದಾಳಿ ಮಾಡಿದ್ದರು.