ಅಬಕಾರಿ ಪದಾರ್ಥಗಳ ಜಪ್ತಿ

ದಾವಣಗೆರೆ; ಏ. 3; :2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಮಾರ್ಚ್ 24 ರಿಂದ ಮಾರ್ಚ್ 31 ರವರೆಗೆ ದಾಳಿ ನಡೆಸಿ ಅಬಕಾರಿ ಪದಾರ್ಥಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ.
  ಜಿಲ್ಲೆಯ ಎಲ್ಲಾ ವಲಯ/ಉಪವಿಭಾಗ ಕಾರ್ಯನಿರ್ವಾಹಕ ಅಧಿಕಾರಿಗಳು ವ್ಯಾಪ್ತಿಯಲ್ಲಿ ಅಕ್ರಮ ಮದ್ಯದ ಸಾಗಾಣಿಕೆ/ದಾಸ್ತಾನು ಕುರಿತಂತೆ ಒಟ್ಟು 108 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.ಜಪ್ತಿಪಡಿಸಲಾದ ಅಬಕಾರಿ ಪದಾರ್ಥಗಳು: ಮದ್ಯ 193.240 ಲೀಟರ್, ಬಿಯರ್ 32.160 ಲೀಟರ್, ಇತ್ಯಾದಿ 13 ದ್ವಿಚಕ್ರ ವಾಹನವನ್ನು ಜಪ್ತಿಮಾಡಲಾಗಿದ್ದು, ಈ ಜಪ್ತಿಪಡಿಸಿದ ಅಬಕಾರಿ ಪದಾರ್ಥಗಳು ಹಾಗೂ ವಾಹನದ ಅಂದಾಜು ಮೌಲ್ಯ ರೂ.6,01,423 ಗಳಾಗಿರುತ್ತದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ತಿಳಿಸಿದ್ದಾರೆ.